Sunday, July 12, 2020

ದೀಪದಿಂದ ನಿಜ ದೀಪಾವಳಿ

ದಿವ್ಯದೃಷ್ಟಿ ನಮ್ಮಸೃಷ್ಟಿ ಸಾಗಲು 
ದಿನದ ಬದುಕಿನ ಕೊವಿಡ್ ಕೊಲ್ಲಲು
ನಮ್ಮ ಸಂರಕ್ಷಣೆ ಮೆರೆಯಲು
ಅಚರಿಸಬೇಕು ನಿಜ ದಿಪಾವಳಿ  

ದೀಪದಿಂದ ಕೊರೊನಾ ಅಳಿಯಲಿ
ದಿಪದಿಂದ ಶಾಪ ದಿವಾಳಿಯಾಗಲಿ
ಲೋಕ ತಮಂದವಳಿದು ನಾಕವಾಗಲು
ಆಚರಿಸುಬೇಕು ನಿಜ ದೀಪಾವಳಿ//

ಆರಿಸಿ ಆಚರಣೆ ನಮ್ಮದಲ್ಲ ಕೇಳಿ
ಎಚ್ಚರದಿಂದ ಹಚ್ಚಿ ದೀಪ,ತಾಳಿ
ಹುಚ್ಚರಾಗಿವಿ ಕೊರೊನಾ ಕೇಳಿ ಕೇಳಿ
ಅಚ್ಚರಿಫಲಿತಾಂಶಕೆ ನಿಜ ದೀಪಾವಳಿ//

ದೀಪ ಸಂಕೇತ, ಭಾವ ಬಿತ್ತ ಬೇಕು 
ಭವ್ಯ ಭಾರತ ಕಟ್ಟಬೇಕು ಜನಕ
ಕಾಶ್ಮೀರದಿಂದ ಕನ್ಯಾಕುಮಾರಿ ತನಕ
ಆಚರಿಸಬೇಕು ನಿಜ ದೀಪಾವಳಿ//

ಭವ್ಯ ಪರಂಪರೆ ಭುವನ ಪುತ್ರರು
ವಿಶ್ವ ಮಾನವತ್ವ ಬೆಳವಣಿಗೆ ಮಿತ್ರರು
ಭೇಧ ಭಾವ ಮನದಿಂದ ಅಳಿಯಲು
ಆಚರಿಸಬೇಕು ನಿಜ ದೀಪಾವಳಿ//

ದಾದಿ ವೈದ್ಯ, ಆರಕ್ಷಕರ ಸ್ಮರಣೆಗೆ
ಪ್ರಧಾನಿಯ ಕರೆಗೆ,ರೋಗ ನಿವಾರಣೆಗೆ
ಕೋಟಿ,ಕೋಟಿ ಭಾರತೀಯರ ರಕ್ಷಣೆಗೆ ಬೆಳಗಬೇಕು ದೀಪದಿಂದ ದೀಪಾವಳಿ//


             ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...