Monday, August 3, 2020

* ಸಾರ್ಥಕತೆ *

ಹಾಡು ಹಳೆಯದಾದರೇನು
ಭಾವ ನವನವೀನ /
ಬೆಳಕು ಯಾವುದಾದರೇನು 
ಹೊಳಪು ನವನವೀನ // ಪ//

ನಿನ್ನ ರಾಗತಾಳಕೆ ಕುಣಿದು ನಲಿದು 
ಒಲಿದು ಸೇರುವ ತನನ/
ಬವಣೆ ಮೀರಿ ಗಿರಿಗಳ ಮೇಲೆ 
ಗಿಳಿಕೋಗಿಲೆಗಳಿಂಚರ //1//

ದ್ವನಿಯು ಯಾರದಾದರೇನು 
ಇಂಚರ ಮಧುರ ಮಧುರ /
ಸಾಗುತಿಹುದು ಹಾಡಿನ ಪಲ್ಲವಿ 
ಹೃದಯ ಗೀತೆಗಳ ಗಾಯನ//2//

ಸಾಗರದಾಳದ ಅಲೆಯ ಮೇಲೆ 
ತೇಲಿ ಬಂತು ಮುತ್ತಿನ ಮೌನ
ಸವಿಯಾದ ಮಾತಿನ ಅಶ್ವ ಶಕ್ತಿ 
ಸೇರಿತಲ್ಲಿ ಶಿವನ ಸಾರ್ಥಕ ಭಕ್ತಿ //3//

ಬಿರಿದ ಭಾವಕೆ ತಂಪನೆರೆಯಲು
ಇಂಪಾದ ನಿನಾದ ಸಂಪದ/
ಬಾರ ಹೊರದೆ ಬಾಗಿತಲ್ಲಿ ಮೋಡದ
ಹನಿ ಮಳೆ ಮುತ್ತಿನ ಕಂಪನ// 4//

          ಬಸನಗೌಡ ಗೌಡರ 

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...