Friday, August 7, 2020

* ಶ್ರಾವಣ *

ಶ್ರಾವಣ ಬಂತು ನಾಡಿಗೆ ಹಾಡಿಗೆ

ನಾವಿಳಿದ ಬಯಲು ಬದುಕಿನ ಗೂಡಿಗೆ

ಬನವೆಲ್ಲ ಹಸಿರಾಗಿ ಚಲುವೆಲ್ಲ ಚಲ್ಲಾಡಿ 

ಚೇತನದ ಚಿಲುಮೆ ಚೆಲ್ಲಿತಲ್ಲಿ //


ಸಿಹಿ ಚಕ್ಕುಲಿ  ಕಹಿಯ ಬಾಳು ಮುಕ್ಕಿ 

ಸಂತಸದ ಭಾವ ಉಕ್ಕಿ ಹರಿಯಿತಲ್ಲಿ/ 

ಶಿವನಾಮ ತೊಟ್ಟಿಕ್ಕಿ ಶಿಲೆ ಮಲೆಗಳರಳಿ

ಕನಸು ಗರಿಗೆದರಿ ಕುಣಿಯಿತಲ್ಲಿ //


ಉಷೆಯಲ್ಲಿ ಕುಣಿದು ಮನತಣಿದು

ಮರಗಿಡದಲಿ ಮನ್ಮಥ ಮೈಮರೆತು/

ಉನ್ಮಾದ ಉಕ್ಕಿ ಸುಮವಾಗಿ ಅರಳಿ 

ಜೋಗುಳ ಹಾಡಿದಳು ಮಲ್ಲಿ ಅಲ್ಲಿ //


ಜಿಟಿ ಜಿಟಿ ಮಳೆಗೆ ಗಟ್ಟಿಕಲ್ಲೆ ಕರಗಿ

ತೋಟದ ಮಾಲಿಗೂ ಶಟರರೋಗ/ 

ಗಿಳಿ ಗೊರವಂಕ ಉಲಿದು ನೀನಾದ

ಗಂಧರ್ವ ಲೋಕ ಸೃಷ್ಟಿಯಾಯಿತಲ್ಲಿ//


ಶ್ರಾವಣ ಶೃಂಗಾರ ಬದುಕೆಲ್ಲ ಬಂಗಾರ 

ಗುಡಿ ಗುಂಡಾರದಲ್ಲರಳಿತು ಭಂಡಾರ/

ಶಿವನ ಪಾದಕೆ ಹೂಮಳೆ ಅರ್ಪಣ

ಗಂಟೆಭಜನೆ ಮನದ ಮಾರ್ಜನವಲ್ಲಿ//


       ಬಸನಗೌಡ ಗೌಡರ 


No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...