Monday, August 10, 2020

* ಆವಾಸ *

ಭಾವ ಜೀವಿ ನಾನು, ಬಾಳೆ ಗೊಣೆ

ಬಾಗಿದಂತೆ ಬಾಗಿಸುವೆ ಎನ್ನ ಹಣೆ.

ಬಿಗುಮಾನ ಬಿಟ್ಟು ಬಂದಿರುವೆ ಕನೆ 

ಬಯಸಬೇಡ ನನ್ನ ಪ್ರಿತಿಗೆ ಕೊನೆ /


ನಿನ್ನ ಕುಡಿ ನೋಟಕ್ಕೆ ಜಾರಿ, ಕರಳು

ಕತ್ತರಿಸಿ ಸುನಕ ನಾ ಸುತ್ತಿದೆ ಹಗಲಿರುಳು.

ಬಿತ್ತರಿಸಿತು ಜಗವು ಪ್ರೇಮಪಾರಿವಾಳ

ಬೀದಿಗೆ ಬರದಂತೆ ಮಾಡೆನ್ನ ಜೀವಾಳ/


ಹೃದಯ ಮಂದಿರದಿ ಹಾಕಿಸಿದೆ ಹಂದರ

ಇಲಿಹೆಗ್ಗನಗಳ ಆವಾಸವಾಗಿದೆ ಇಂದು

ಬೆಕ್ಕಾಗಿ ಕಚ್ಚಿ ತಿನ್ನಬಾರದೆ ನೀ ಬಂದು

ಹಾಕು ನೀ ರಂಗಿನ ರಂಗೋಲಿ ತಂದು/


ಹುಚ್ಚು ಹಚ್ಚಿದೆ ನಿಚ್ಚಳವಾಗದ ರೋಗ 

ಅಲೆಯಾಗಿ ಅಪ್ಪಳಿಸಿದೆ ಭಾವತರಂಗ

ಕಡಲಿಗೂ ಕೊನೆಯಿದೆ ಭಾನಂಗಳಕೆಲ್ಲಿ

ಬಯಕೆಯ ಮೀರಿಸಿದ ಭುವನವೆಲ್ಲಿ / 

                         ✒ ಬಸನಗೌಡ ಗೌಡರ


No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...