Monday, August 10, 2020

* ಬೆಳಕು *

ತೊಲಗಿ ಅಜ್ಞಾನ, ಬೆಳಗಲು ಸುಜ್ಞಾನ

ಬೆಳಕು ಪಸರಿಸಿಲು ಬೇಕು ಜ್ಞಾನ ದೀಪ/ಪ/


ಅಂದಕಾರದ ನಡುವೆ ಪಂದ್ಯಗಳು

ಚಂದದ ಮಾತಿನಿಂದಾದ ಬಲೆಗಳು

ಸಂದುಗಳು ಇವೆ ಸಭಲರಿಗೆ ನಿನಗಲ್ಲ

ಜ್ಣಾನದ ಬಲವಲಗು ನಿನಾಗು ಸಬಲ


ಹುಟ್ಟುತಾ ಬೆಳಗಿಹರು ನಿನ್ನ ಮನೆಯ

ತಟ್ಟಿ ಕೆಟ್ಟಿತು ಜಗದ ಸ್ವಾರ್ಥ ನಿಯಮ

ಗಟ್ಟಿ ಮಾಡಿಕೊಳ್ಳಬೇಕು ನೀ ಹೃದಯ

ಪಟ್ಟಿ ಮಾಡಲು ದಾರಿ ಬಹು ದೂರ//


ಕಲ್ಲು ಮುಳ್ಳಿನ ಹಾದಿ ಕ್ರಮಿಸಬೇಕು

ಗೆಲ್ಲಬೇಕು ನಿತ್ಯ ಜ್ಞಾನದೀಪ ಬೆಳಗಿಸಿ.

ಕಂದಕ ಕಮರಿಗಳ ಸಹವಾಸ ಸಾಕು 

ಗಂಟು ಬಿಡಿಸಿ ಸರಳಗೊಳಿಸಬೇಕು//


ಬತ್ತಿಯಾಗಿ ಉರಿದರು ಶರಣರು

ಎಣ್ಣೆಯಾಗಿ ಹಿಂಗಿದರು ಹಿರಿಯರು

ದೊಣ್ಣೆಯಾಗಿ ಮೆರೆದರು ಕದಿಮರು

ಸೌದೆಯಂತೆ ಉರಿದು ಬೆಳಕಾಗಿಹರು/


ದಾರಿ ತೋರುವುರು ನಿಜ ಗುರುಗಳು

ಮೋರಿ ತೋಡುವುರು ಜಡ ಅರಿಗಳು

ಸೈರಣೆ ತುಂಬುವರು ನಿಜ ಸ್ನೇಹಿತರು

ಸನ್ಮಾರ್ಗದಲ್ಲಿವೆ ಬದುಕಿನ ಪಾಠಗಳು/


            ✒ ಬಸನಗೌಡ ಗೌಡರ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...