ವಲವಿನ ಸ್ನೇಹ ಜಡವಾಗಿ ತಪ್ಪಿದೆ ದಾರಿ
ಬಲವು ಜಾರುತಿದೆ ಕಾಲ ಕೈಮೀರಿ
ವಿಕ್ರಮಸಾಧಿಸುವ ಪರಿ ಹೇಳು ನಾರಿ
ಸಕ್ರಮ ದಾರಿಯಲಿ ಕಾಣುತಿವೆ ಕಮರಿ//
ಕಣ್ಣೀರು ಕರಗಿ ಹೊಳೆಯಾಗಿ ಹರಿದು
ಕಡಲು ತಡಿಗೆ ಗಡಿಬಿಡಿಯಿಂದ ಸರಿದು
ನೇಸರನ ರಶ್ಮಿಗೆ ಹೆದರಿ ನಭಕೆ ಜಿಗಿದು
ಕರಿಮೋಡ ನಿನ್ನೊಡಲ ಸೇರಬರುತಿದೆ//
ಇಬ್ಬನಿ ದರ್ಪಣದ ಬಿಂಬ ಬೆಂಬತ್ತಿ
ಮುಸುಕಿದ ಮಬ್ಬಿನಲ್ಲಿನೋಡಿದೆ ಕತ್ತೆತ್ತಿ
ಮನಶಾಂತಿಗೆ ತಿರುಗಿದೆ ಮಾಯೆ ಸುತ್ತಿ
ನೀನಡಗಿದ ಸುಡಗಾಡದಲಿ ನಾ ಸತ್ತೆ//
ನೆನಪಿನ ಡೋಣಿಯ ನಲ್ಮೆಯ ಕನಸು
ವೇದನಯ ಕರಗಿಸಿ ಹೂವುನು ಹಾಸಿ
ಕೋಗಿಲೆ ಕೂಗು ಜೋಗುಳ ಹಾಡಿಸಿ//
ನವಿಲಿನ ನರ್ತನ ತಂತು ಮಂದಹಾಸ
✒ ಬಸನಗೌಡ ಗೌಡರ
No comments:
Post a Comment