Thursday, August 13, 2020

* ಜಗದ ನಿಯಮ *

ಜಗದ ನಿಯಮ ಮೀರಲಾಗದು
ನಮ್ಮದೇನೂ ಅಲ್ಲಿ ನಡೆಯದು/
ನಿನ್ನ ಕರುಣೆ ಇಲ್ಲದೇನು ತಿಳಿಯದು
ಹುಲ್ಲು ಕಡ್ಡಿ ಇಲ್ಲಿ ಅಲುಗಾಡದು //

ಹೆಣ್ಣು ಗಂಡು  ಲೋಕದೆರಡು ಕಣ್ಣು
ಸುಂದರವಾಗಲು ಹೊರಬೇಕು ಮಣ್ಣು
ಹೊಂದಿಕೊಂಡಿರಲು ಜೀವನ ಪಾವನ
ನಡೆಯಬೇಕು ಅಲ್ಲಿ ಸೃಷ್ಟಿ ವಿಕಸನ//

ಮದುವೆಯೆಂಬ ಮೂರಕ್ಷರ ಜಾತ್ರೆ
ಮಸಣದವರೆಗೆ ನಡೆಯುವ ಯಾತ್ರೆ/
ಮಹಾದೇವನವರೆಗೆ ತಲುಪುವ ಸೂತ್ರ
ಕರಿಮಣಿ ಕಟ್ಟಿ ಬೆಳಗಬೇಕು ಮಿತ್ರ//

ಸಪ್ತಪದಿ ತುಳಿದು ಸತ್ಯದಿಂದ ನುಡಿದು
ಸಾಗಬೇಕು ಸಂಸಾರ ಸಾಗರ ಹಿಡಿದು/  
ಸಹಜ ಏರಬೇಕು ಸವಾಲು ಪಡೆದು
ಸೋತು ಗೆಲ್ಲಬೇಕು ಸಾವು ತಡೆದು//

ಜಾತಿಯಭ್ರಮೆ ಅಳಿಸಿ ನೀತಿ ಬೆಳಸಿ
ಪ್ರೀತಿ ಪ್ರೇಮದ ಮಹಲು ನಿರ್ಮಿಸಿ/
ಚಾತಿಯಿಂದ ಕಟ್ಟಬೇಕು ನಂದನವನ
ಹೂವಾಗಿ ಅರಳಬೇಕು ನಮ್ಮತನ //

                 ✒ ಬಸನಗೌಡ ಗೌಡರ


No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...