ಪ್ರೀತಿ ಜ್ವರ ತರಣರಲ್ಲೇರುವುದು ಸಹಜ
ಯುವ ಬೆವರಿನಲ್ಲೆ ನಿಂತಿದೆ ಸಮಾಜ/
ಚಾಕರಿ ಬದುಕಿಗೂ ಕ್ಯೂಗಳ ಸಾಲು
ಬಿಕಾರಿಯಾಗದೆ ಸ್ವೀಕರಿಸು ಸವಾಲು//
ಜಗಕೆ ಪಾಠ ಹೇಳಿದ ದೇಶ ನಮ್ಮದು
ಭವ್ಯ ಇತಿಹಾಸ ಪರಂಪರೆ ತವರಿದು /
ಬಿಸಿರಕ್ತದುಸಿರಿಲ್ಲದೆ ಜಡ ಕರಗದು
ಯುವ ಪಡೆ ನಡೆಯದೆ ತಲುಪದು //
ಯುವಕಂಗಳಲ್ಲಿ ಬೆಟ್ಟದಷ್ಚು ಆಸೆ
ದಡ ಸೇರಲು ಬೇಕು ಗಟ್ಟಿ ಸಾಹಸ
ಭಟ್ಟಿ ಇಳಿಸದೆ ಪರಶುದ್ಧತೆ ಬರಿ ಕನಸು
ಬಯಲಿಗೆ ಬಿದ್ದು ಗೆದ್ದರದು ನನಸು//
ತರುಣರ ಕಿರಣ ಬೀಳದೆ ಇಲ್ಲ ಬೆಳಕು
ಗುರಾಣಿ ಹಿಡಿದು ಮುನ್ನುಗ್ಗಬೇಕು /
ದೇಶ ಕಟ್ಟಲು ನಾಳೆ ಎನ್ನುವುದು ಸಾಕು
ಹಗಲುಗಾಣಲು ಭಾಸ್ಕರ ಬರಬೇಕು//
ಬಸನಗೌಡ ಗೌಡರ
No comments:
Post a Comment