Tuesday, August 18, 2020

* ಬದುಕಲು ಬಿಡಿ *

ಚಂದ್ರನ ಬೆಳದಿಂಗಳು ತಂಪು ಸೂಸಿ 

ಇಂದ್ರನ ಸಭಾಂಗಣ ವೈಭವ ಮೀರಿಸಿ
ಹೊಂಬೆಳಕು ಸೂಸುವ,ಯಾರಿ ಅರಸಿ
ನಸುನಾಚಿ ನೀರಾಗಿ ನಿಂತಳುಸಿರಾಕಿ//

ಮಹಲು ಉರುಳಾಗಿ ನತ್ತು ಬಾರವಾಗಿ
ನೈದಿಲೆಯಂತೆ ಚಾಚಿಹಳು ಕೆಸರಿನಾಚೆ
ಈಚೆ ಬಂದರೆ ಕಷ್ಟ, ಆಚೆ ಬರಿ ಕೊಳಚೆ
ಸ್ವಾತಂತ್ರ್ಯ ಬಯಸಿ ಬಂದಿಹಳೀಚೆ  //

ಕಿತ್ತು ತಿನ್ನುವ ಹತ್ತು ಕಣ್ಣುಹೊರಗೆ
ನಮ್ಮ ಸಂಸ್ಕೃತಿಯ ಪಾಠ ಒಳಗೆ/
ಕತ್ತು ಬಗ್ಗಿದರೆ ಸಂಪ್ರದಾಯ ಕುಲಾವಿ
ತಲೆಯತ್ತಿ ನಡೆದೆ ಹೆಮ್ಮಾರಿ ಪದವಿ//

ಬೆಳೆದವಳು, ಕಾದು ಗೆಳೆಯನಿಗೆ
ಬೆಳಕಾಗುವಳು ಸೇರುವ ಮನೆಗೆ
ಬದುಕಲು ಬಿಡಿ ಬಂದಂತೆ ಮನ
ಬೆಂದು ಮಾಡುವಳು ನಂದನವನ//

        ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...