Wednesday, August 19, 2020

* ಅಪ್ಪನ ಅಂತಹಕರಣ *

ಅಪ್ಪನ ಅಂತಹಕರಣ ಅಮೃತದಾರೆ 

ಅನುದಿನವು ಅಭಯ ಮಸ್ತಕದ ಮೇಲೆ//

ತಾನು ನೆನೆದರೂ ತನಯನ ಮೇಲೆ 

ತನುವೆಲ್ಲ ಹನಿಯಾಗಿ ಹೂವು ಮಳೆ//


ಅರೆಬಟ್ಟೆ ತಾನುಟ್ಟು ಗರಿತೀಡದ ಬಟ್ಟೆ

ಟೈ ಕಟ್ಟಿ ಕಳುಹಿಸುವನು ತಾ ಬೆನ್ನುತಟ್ಟಿ/

ಗುರುವಿನಲ್ಲಿ ತಾ ದೇವರು ಕಾಣುವನು

ಅಳು ನುಂಗಿ ನಗುತ ಬೀಳ್ಕೊಡುವನು//


ಭೂತಾಯಿಮಗ, ಬೆವರಿನ್ನೆ ಬಸಿದು 

ಕೆಸರಲ್ಲಿ ಹಸಿರು ಉಸಿರಾಗಿಸಿದವನು/

ಬಾನೆತ್ತರದ ಭರವಸೆ ಮಗನಲ್ಲಿಟ್ಟು

ಅಳು ನುಂಗಿ ನಗು ತೇಲಿಬಿಟ್ಟವನು//


ಮುಗ್ಧ ಮಗುವಿನ ಮುಖದಲ್ಲಿ ಸಗ್ಗ 

ಹಿಗ್ಗುತಾ ಮರೆಯುವನು ಜಗದ ಕಗ್ಗ/

ಜಗದ ಹೊಗಳಿಕೆ, ತೆಗಳಿಕೆಗೆ ಬಗ್ಗದೆ

ತಾನಿರುವ ದಾರಿಯಲಿ ಲೋಕಕ್ಕೊಗ್ಗಿದ


              ಬಸನಗೌಡ ಗೌಡರ

.

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...