Thursday, August 27, 2020

* ಧರಣಿ *

 

ಯಾರು ತೇಲಿ ಬಿಟ್ಟರೀ ರಮ್ಯ ಧರಣಿ

ತಾರೆಗಳ ಹಿಂಡೆ ಇದರ ಕಡೆ ಗುಮಾನಿ

ಭಾಸ್ಕರನಾಗಮನ ಕಾದವರೀಗ ಕಾಣೆ   

ಸಸ್ಯರಾಶಿಯಾಯಿತು ಶಿವನ ಶಯನ//


ಅರಳಿಯ ಹಿಂಜಿ ಹಾಕಿದ ಅರಳುವ 

ಸುರಳಿ ಚಿತ್ತಾರ ಮೋಡದ ರಂಗೋಲಿ /

ಚುಮು ಚುಮು ಚಳಿಯ ಮಂದ ಗಾಳಿ
ಇಬ್ಬನಿ ನರ್ತನ ಆರ್ದ್ರ ದರ್ಪಣ ದೂಳಿ//

ಶಿವ ಜಿಪುಣ ನೀಡಿದ ಎರಡೆ  ನಯನ
ಸೊಬಗು ಸವಿಯಲು ನಡೆದಿದೆ ಕದನ
ಜೊಂಜಾಟದ ಬದುಕಾಗಬೇಕು ನಿಧನ
ಆಸ್ವಾದಿಸುವ ಗುರುವಿಗೆ ನನ್ನ ನಮನ//

ಶಶಿಧರನುದಯವ ತಿಳಿಯದ ಗಹನ
ರೂಪ ಬದಲಿಸಿ ಬರುವನು ದಿನ ದಿನ
ತಂಪನು ನೀಡಿದ ಕದಡಿದ ತಮವನು
ಇವನಿಗೂ ಕಾದಿದೆ ಮೋಸದ ಗ್ರಹಣ//

                 ಬಸನಗೌಡ ಗೌಡರ

   

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...