Tuesday, September 29, 2020

* ದಾರಿ ಕಾಣದು *

ದಾರಿ ತೋರಿದರು ಮನುಜಗೆ ಪ್ರಾಣಿ 

ಪಕ್ಷಿಗಳಾದರೇನು ಸರಿ ಸಹ ಜೀವನ 

ಮರೆತು ಪಾಲಿಸದೆ ಮಾಡಿದರು ಹರಣ

ಜೀವಸಂಕುಲ ದಾರಿ ತಪ್ಪಿತು ಈ ದಿನ//


ಕಾಡಿನ ಕಾವಲು ಮುರಿದ ಕದಿಮರು

ನಾಗರಿಕತೆ ಬೆಳವಣಿಗೆಯ ಹಾಡಿದರು

ಕವಲು ದಾರಿಯಲ್ಲಿ ಅರಿಯದವರು,

ಕಾಲ ಬಂದಾಗ ಉತ್ತರಿಸವರಾರು//


ಕತೆ ಹೇಳಲು ನೈತಿಕತೆಯ ಬಳಸಿ

ಜೊತೆ ನಡೆದು ಹೇಳಿದ್ದು ಬರಿ ಹುಸಿ 

ಪ್ರಕೃತಿಯ ಹಿತ ಬಯಸಿದಂತೆ ನಟಿಸಿ

ವಿಕೃತಿ ಮೆರೆದರು ಸಮಯ ಸಾಧಿಸಿ//


ಬನದ ಮುಖವೆಲ್ಲ ಕೆಂಪಾದವೊ  

ನಾಡಿನ ಬದುಕೆಲ್ಲ ಕೊಂಪೆಯಾದವು

ದುರಾಶೆಯ ಜೀವನ ನಿರಾಶೆಯಾದರು

ಬರಲಿಲ್ಲ ಬುದ್ಧಿ ಬವಣೆ ಬಂದರು. //


   🖋️.ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...