Wednesday, November 11, 2020

* ಅರಿತು ನಡೆ *

ಅಖಾಡಕ್ಕೆ ಇಳಿಯುವಾಗ

ಎದುರಾಳಿಯ ಆಳದ ಅರಿವಿರಬೇಕು 

ಅಂದಾಗ ಚಡ್ಡಿ ಹಾಕಬೇಕು/

ಇಲ್ಲಾಂದರ ಚಿತ್ತ ಮೇಲಾಗಿ

ಮುಖ ಮಣ್ಣಿನ ಕಡೆ ಮಲಗಬೇಕು //


ಉಪದೇಶ ಮಾಡುವಾಗ 

ನೈತಿಕವಾಗಿ ಜೀವನ

ನಡೆಸಿರಬೇಕು/

ಇಲ್ಲಾಂದರ ಟೊಮೋಟೂ ತತ್ತಿ 

ಒಗಿಸಿಕೊಳ್ಳಾಕ ತಯಾರಿರಬೇಕು// 


ಕುಣಿಯುವಾಗ ನೆಲದಾಗ

ಸಮತಲ ನೋಡಿರಬೇಕು

ಜಗತ್ತು ವಿಶಾಲವಾಗಿರುವದಾದರ /

ಅದರಾಗ ತೆಗ್ಗು ದಿನ್ನೆ ನೋಡಾಕ 

ರವಿಕಿರಣ ಬರಬೇಕು //


ಸಂಸಾರವಿರುವದು ಸಹಕಾರದಾಗ  

ತಯಾರಿರಬೇಕು ತಂದ ಹಾಕಾಕ 

ಹೆಂಡಿರು ಮಕ್ಕಳು ಗುಲಾಮರಲ್ಲ /

ಬಿಡುವಿದ್ದಾಗ ಮಜಾ ಮಾಡಾಕ

ಇಲ್ಲಾಂದರ ತಯಾರಿರು ಸನ್ಯಾಸಿಯಾಗಾಕ//


ತಂದೆ ತಾಯಿ ಭೂಮಿಮ್ಯಾಗ

ದೇವರಂತ  ಋಣ ತಿಳಿಬೇಕು

ತೀರಸಾಕ ಹಾತೊರೆಯುಬೇಕು/

ಇಲ್ಲಾಂದರ ದೇವರ ಫೋಟೋ 

ಪೂಜಿಸದೆ ಬೀಸಾಕಿ ಬರಬೇಕು//


ಹಿಂದೆ ನೋಡಬೇಕು ಓಡುವಾಗ

ಕ್ರಮಿಸುವ ದಾರಿ ತಿಳಿಯಾಕ

ಪ್ರಯತ್ನ ದಿಂದ ಪರಿಪೂರ್ಣತೆ /

ನಿಂದಕರಿದ್ದರ ಹೆದರುದ್ಯಾಕ

ಹಂದಿಗಳ ಸ್ವಚ್ಛತೆಯಂಗ ತಿಳಿಬೇಕು//


       ಬಸನಗೌಡ ಗೌಡರ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...