Saturday, November 7, 2020

* ಅನ್ನ ದೇವರು *

 ಹಸಿದ ಒಡಲಿಗೆ ಬಿಸಿದು ತಂಗಳು 

ಭೇಧ ಹೊಸೆವರೇನು ಭಾಷೆಗಳಲಿ,

ಹೊಟ್ಟೆಯೇ ಹೊರೆ, ತುಂಬಿದಾಗ

ಬಟ್ಟೆಯ ಬಡಿವಾರ ಬರುವುದಾಗ //


ತುತ್ತು ಅನ್ನದ  ತತ್ವಾರ ಕಡು ಬಡತನಕೆ

ಮತ್ತೇರುವುದು ದುಡಿಯದ ಸಿರಿತನಕೆ

ದುಡಿದು ಪಡೆ ದರಿದ್ರನಲ್ಲ ಕೊನೆತನಕ

ಬಿಡಬೇಡ ಅನ್ನ, ಹಸಿದವರಿರುವತನಕ //


ಮದುವೆಯು ಮನ ಕಟ್ಟುವ ಕಾರ್ಯ

ಉದಯವಾಗಬೇಕಲ್ಲಿ ದಿಟ್ಟ ಸೂರ್ಯ

ಬೆಳಕು ಹೊರಚಾಚಲು ಬೇಕು ದೈರ್ಯ

ಸಾಗುತಿದೆ ಥಳಕು ಬಳಕಿನ ಕೈಂಕರ್ಯ//


ಮೌನದಿಂದುತ್ತರಿಸಿದ ಸಂಬಂಧ ತತ್ತರ

ಬಿರುಗಾಳಿಗೆದುರಾಗಿ ಬೀಸಲಿ ತಂಗಾಳಿ

ಬಿಡದೆ ಬೀಸುವ ಬಿಗುಮಾನದ ಗಾಳಿ

ಒಡೆದು ಹಾಕುವುದು ಸಂಸಾರದ ಹಳಿ//


ಮಸಣಕೆ ಹೋಗುವ ಮುನ್ನ ಕಸಕೀಳು

ಹಸನಾದ ಹೊಲದಲಿದೆ ಪ್ರಸಾದ ಬೆಳೆ

ಅನ್ನದ ಬೆಲೆಯರಿತವನುಂಡರೆ ತೃಪ್ತ 

ಅರಿಯದುಳಿಸಿದರೆ ಸಿಗುವುದೆ ತೃಪ್ತಿ? //


No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...