Saturday, October 31, 2020

* ಕಾಯಿಸುವ ರೋಗ *

ಕೊರೋನಾಕಿಂತ ಕರಾಳ ಕಾಯಿಸುವ 

ರೋಗ, ಕಾಡುತ ಹರಡಿದೆ ಜಗದೊಳಗ/

ಕಾದು ಜನ ಸುಸ್ತು ಅಧಿಕಾರ ಬಲದಾಗ

ಸಹನ ತಲೆ ಕೆರೆಯಿತು ಬಾಗಿಲುದಾಗ//


ಹರಿದು ತಿನ್ನಲು ತಿರುಗುವವು ಬಕಪಕ್ಷಿ

ಇವುಗಳ ಕೊಲ್ಲಬೇಕು ಸ್ವಾತಂತ್ರ್ಯ ಹಕ್ಕಿ/

ಆದರೇನು ಕಣ್ಣಿಗೆ ಕಟ್ಟಿರುವರಲ್ಲ ಪಟ್ಟಿ

ನಿಧಾನಿಸಿ ಇಡುವರು ಸುಳ್ಳಿನ ಬುಟ್ಟಿ//


ಮಜಾ ತೆಗೆಯುವ ಹುಡುಗಿಯರಂತೆ 

ಇವರೇನು ಕಡಿಮೆ, ಬಿಡುವರು ಬುರಡೆ/

ನಂಬಿದವ ಆದ ಇಂಗು ತಿಂದ ಮಂಗ

ಜಾರುವ ಮುನ್ನ ಬಿಡಬೇಕಿವರ ಸಂಘ//


ಕಾಸಿಗಾಗಿ  ಬೀಸುವರು ಸುಳ್ಳಿನ ರಾಶಿ,

ಕನಸು ಕಾಣುವನಾದ ನಂಬಿ ಪಿಕನಾಶಿ

ಮೋಸ ಹೋಗಿ ಬಿಡಲಾರದವರು ಹೇಸಿ

ಮತ್ತೆ ಪಡೆಯಲು ಮಾಡತಾರ ಚೌಕಶಿ//

            ಬಸನಗೌಡ  ಗೌಡರ


No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...