Tuesday, October 27, 2020

* ಬೇಡ ಸಂಚಲನ *

ನಡೆ ಮುಂದೆ, ನಡೆ ಮುಂದೆ, ಪಡೆದು

ಸೇರಬೇಕು ಸದ್ಗಗತಿಯ ಗುಂಪಿನ ಕಡೆ

ಸೋಲು ಗೆಲುವಿಗೂ ಸೇರಬೇಕು ಪಡೆ 

ಸಾವು ಬದುಕಿನಡುವೇರಬೇಕು ಹುಡೆ/


ಗೆದ್ದರೆ ಜಗವೆ ಆಗುವುದು ಪಡಸಾಲೆ

ಗದ್ದುಗೆ ಪಡೆದವರಿಗೆ ವಿಜಯಮಾಲೆ

ಬಿದ್ದಾಗ ತಿಳಿಯುವುದು ಶುದ್ಧಿಯ ಬೆಲೆ

ನಿದ್ದೆಯ ಬಿಡು ತಿಳಿ  ಮಾಯದ ಬಲೆ//


ನಿಂತರೆ ನಿನ್ನದೆ ನಿನಗಾಗುವುದು ಬಾರ

ಅಂತರ ಅರಿತು ನೀನಾಗು ನಿಜ ಶರಣ

ಅನವರತ ಕ್ರಮಿಸು ಸಾಧನೆಯ ದೂರ

ಅನಂತದಲ್ಲಿರುವನು ಹರಸುವ ಹರ //


ಕಾಣದ ಕಡಲಿಗೆ ನಡೆದಿದೆ ಕದನ 

ಸೇರದ ಒಡಲಿಗೆ ಸಂಚಲನ ವದನ

ಸವಕಳಿ ದೇಹಕ್ಕಿಲ್ಲ ಸಾವಿರ ವರುಷ

ಸಹನೆಯಿಂದ ಸೇರು ಬೇಕು ಮನುಷ//

          ಬಸನಗೌಡಗೌಡರ







 

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...