Friday, December 25, 2020

* ನೇಗಿಲು ಯೋಗಿ *

ನೇಗಿಲು ಯೋಗಿ ಭೂಮಿಗೆ ಬಾಗಿ

ಬೆವರನು ಹರಿಸಿದೆ ಹಟ ಯೋಗಿ /

ನಾಡು ನೋಡುವುದು ಹೃದಯ ತಾಗಿ 

ಗೌರವ ಪಾಲಿನಲಿ ನಿನ್ನ ಸಾಲು ಕಡೆ ತ್ಯಾಗಿ//


ಬವಣೆ ನೂರು ಸೊರುತಿದೆ ಸೂರು

ಹರಿದಂಗಿಯಲುಕ್ಕಿದೆ ವಿಶ್ವಾಸದ ಉಸಿರು/

ಸರ್ವ ಸವಾಲು ಒಡಲೊಳು ಎಳೆದಿದೆ ತೇರು.  

ಸಮಾನರು ನಿನಗಿಲ್ಲ ಯಾರು ಯಾರು //


ವರುಣನ ಕರುಣೆ  ಎಣಿಸದೆ ದಣಿದೆ

ಧರಣಿಯ ಪ್ರೀತಿಗೆ ದೇಹವ ಮಣಿದೆ/

ಕಷ್ಟಕೆ ಕುಗ್ಗದೆ ಇಷ್ಟದಿ ನುಗ್ಗುವೆ ಮುಂದೆ

ಸ್ಪಷ್ಟತೆ ಕಾಣದ ಜಗವೆ ನಿನ್ನ ಹಿಂದೆ //


ಕಟ್ಟಲಾಗದು ಬೆಲೆ ಜಗ ನಿನ್ನ ಮಹಿಮೆ

ಕುಲವಿಲ್ಲದ ಶ್ರಮ, ನೆಲವೆ ನಿನ್ನಾಶ್ರಮ,/ 

ಹೊಲದಲಿ ಊಳುವುದೆ ಪೂಜೆಯ ಕ್ರಮ,  

ಬೆವರಿನ ಬಿಸಿ ಉಸಿರೆ ನಿನ್ನ ಹೋಮ //


ಕಡೆಗಾಳು ತಿಂದು ಹಿಡಿಗಾಳು ನೀಡಿ

ಕೊಡಗೈ ನೀನಾದೆ, ಪಶು ಪಕ್ಷಿ ಕಾಪಾಡಿ/

ಹುಸಿಯನಾಡುತ ಹೊಸೆದರು ಜಾಲ

ಬೆಸಗೊಳ್ಳದೆ ದೀನನಾಗಲಿಲ್ಲ ನೀ ಬಾಗಿ//


ನನ್ನ ನಮನ ಯೋಗಿ, ನನ್ನ ನಮನ ಯೋಗಿ,

ನನ್ನ ನಮನ ಯೋಗಿ. //


             ಬಸನಗೌಡ ಗೌಡರ




No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...