Friday, December 11, 2020

" ಧರಣಿ ಪಟ್ಟ "

ಬದುಕೊಂದು ಬಯಸದೆ ಬಂದ ಭಾಗ್ಯ

ಬೆಸೆದು ಬೇಯಿಸಿ ಬೆಂದ ಕಾಳಂತೆ,

ಆಸ್ವಾದಿಸಿದರೆ ಬಹು ಚಂದ ಅಂದ

ಭ್ರಮನಿರಸನ ಹಾಕಬೇಕು ಕೊಂದು//


ಬಾಳ ನೌಕೆಗೆ ಗಾಳ ಹಿಡಿದು ಕಡಿದು

ಮೇಲೆ ರೇಖೆಗಳನ್ನು ಬರೆದು ಕೊರೆದು

ಬಣ್ಣದ ಚಿತ್ತಾರದ ಚಿತ್ರಗಳನ್ನು ತೆಗೆದು

ಸದ್ಭಾವದ ಭವನ ನಿರ್ಮಿಸಬೇಕಿಂದು//


ಹೊರಹೋಗದಂತೆ ತಿರುಗಣಿ ಎಳೆಸು

ಹೂಮಳೆ ಸುರಿಸಿ ಬಾಗಿಸಿ ಬದಲಿಸು

ಸರಸದ ಸಲ್ಲಾಪ ವಿರಸದ ಪರಿತಾಪ        

ಹೊರಸೂಸುವವು ಸಂಗೀತಾಲಾಪ//


ಬದಕು ಬಿಟ್ಟವರೆಲ್ಲ ಸಿದ್ಧ ಬುದ್ದರೇನಲ್ಲ

ಬದುಕಿಗಾಗಿ ಕೊಂದ ಅಂಗುಲಿ ಇಲ್ಲಿಲ್ಲ

ವ್ಯಾದ ಬದಲಾಗಿ ಮಹರ್ಷಿಯಂತಲ್ಲ

ಓದಿ ಪಡೆ,ಸಿಗಲದು ಹಾದಿ ಕಲ್ಲಲ್ಲ//


ಬಂದಷ್ಟೆ ಬದುಕು, ಸಿಕ್ಕಷ್ಟೆ ಸ್ವೀಕರಿಸು

ಬಾರದನ್ನು ಬದಿಗಿರಿಸಿ ಬದಲಾಯಿಸು

ಬೆಟ್ಟದ ದಾರಿ ದಿಟ್ಟತನದಿಂದ ದಿಟ್ಟಿಸು

ಗಟ್ಟಿ ಗೊಂಡರೆ ಧರಣಿ ಪಟ್ಟ ಸಲೀಸು//

ಬಸನಗೌಡ ಗೌಡರ 


          

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...