Wednesday, April 28, 2021

*ಆಕ್ರೋಶ ಕೊಂದ ಕರುಣೆ*

           ಸುಮಾರು 200 ಮನೆಗಳಿರುವ ಕುಗ್ರಾಮ ಅಲ್ಲಿರುವುದು ಎರಡೆ ಪ್ರಧಾನ ಉದ್ಯೋಗಗಳು ಒಂದು ಕೃಷಿ ಇನ್ನೊಂದು ಕುರಿ ಸಾಗಾಣಿಕೆ (ಆರ್ಥಿಕ ಪರಿಭಾಷೆಯಲ್ಲಿ  ಕುರಿ ಸಾಕಾಣಿಕೆಯೂ ಕೂಡಾ ಕೃಷಿಯಲ್ಲಿಯೆ ಬರುತ್ತದೆ ಆ ಮಾತು ಬೇರೆ)ಆ ಊರಿನಲ್ಲಿ ಹನಮಂತನೆಂಬ ಪ್ರಗತಿಪರ ರೈತ ಇದ್ದ  ಜಮೀನು ಕಡಿಮೆ ಬುದ್ಧಿವಂತಿಕೆಯಿಂದ ಎಲ್ಲರಿಗಿಂತ ಆದಾಯ ಹೆಚ್ಚು ತೆಗೆದು ಮಾದರಿ ರೈತನಾಗಿದ್ದ ಮತ್ತು ತೆಗೆದ ಆದಾಯದಲ್ಲಿ ಸಂತೋಷದಿಂದ ಜೀವನ ನಡಿಸುತ್ತಿದ್ಧ.ಪ್ರಗತಿಪರ ಎಂದಾಗ ಆತ ನಿಸರ್ಗದ ಪ್ರೀಯ ಇರಲೆ ಬೇಕಲ್ಲವೆ ? ಹೊಲದಲ್ಲಿ ನಾಲ್ಕು ಮಾವು ,ಆರು ಬೇವು ಮೂರು ಹುಣುಸೆ ಮರಗಳನ್ನು ಬಹು ಪ್ರೀತಿಯಿಂದ ಬೆಳೆಸಿದ್ದ ಅದೊಂದು ಸ್ವರ್ಗ ಎಂದರೂ ತಪ್ಪಾಗಲಾರದು.ಮರಗಳಿಲ್ಲದ ಹೊಲ ಅದು ಹೊಲವಾದರೂ ಹೇಗಾದೀತು ? ಹೊಲಕ್ಕೆ ಹೋದರೆ ಆತನ ಕಣ್ಣು ಮೊದಲು ಹೋಗುವುದೇ ಅವುಗಳ ಮೇಲೆಯೆ.ಅದರಿಂದ ಸಿಗುವ ಆನಂದ   ಇನ್ನಾವುದರಿಂದ ಸಿಗಲು ಸಾಧ್ಯ ಹೇಳಿ ? ಅದು ಅನುಭವಿಸಿದವರಿಗೆ ಗೊತ್ತು ಬಿಡಿ. ಒಂದು ದಿನ ದನಗಳೊಂದಿಗೆ ಹೊಲಕ್ಕೆ ಸಮೀಪ ಹೋದಾಗ ಏನೋ ಕಸವಿಸಿ ತನ್ನ ಬೇವಿನ ಮರದ ಟೊಂಗೆ ಬೋಳು, ಬೋಳಾಗಿರವಂತೆ ಬಾಸವಾಯಿತು. ಕಣ್ಣು ನಂಬಲಾಗಲಿಲ್ಲ ಲಗು ಬಗೆಯಿಂದ ಹತ್ತಿರ ಹೋದಾಗ ಮನಸ್ಸಿನಲ್ಲಿ ತಳಮಳ .ಆದರೇನು ಮಾಡುವುದು ನಾಲ್ಕಾರು ಟೊಂಗೆಗಳನ್ನು ಕಳೆದುಕೊಂಡಿದ್ದ ಮರ ತನ್ನ ಅಸಾಹಯಕತೆಯನ್ನು ಅತ್ತು ಹೇಳಿದಂತಾಯಿತು. ಕಡಿದವನಿಗ ಹಿಡಿ ಶಾಪ ಹಾಕಿ ಸಂಜೆವರೆಗೂ ಯಾರು ಕಡೆದಿರಬಹುದು ಎನ್ನುವ ಲೆಕ್ಕಾಚಾರದಲ್ಲಿ ಸೂರ್ಯ ಜಾರಿದ್ದೆ ತಿಳಿಯಲಿಲ್ಲ. ಬಾರವಾದ ಹೃದಯದಿಂದ ತನ್ನ ಹಸುಗಳನ್ನು ಎಳೆಯುತ್ತ ಮನೆ ತಲುಪಿದ. ಊಟ ಸೇರದು ಮತ್ತೆ ಕಾಡುವ ಪ್ರಶ್ನೆ ಗಳಿಗೆ ಉತ್ತರ ನೀಡುವವರು ಯಾರು ? ಈ ರೀತಿ ಗಿಡ ಕಡಿಯುವವರು ಹಗಲಿನಲ್ಲಿ ಕಡಿಯಲು ಸಾಧ್ಯವಿಲ್ಲ ಅವರು ರಾತ್ರಿಯೆ ಮಾಡಿರಬಹುದು ಎಂದು ತಿಳಿದು ಅದರಂತೆ ಕಾರ್ಯ ಯೋಜನೆ ರೂಪಿಸಬೇಕೆಂದು ನಿರ್ದರಿಸದ .ರಾತ್ರಿ ನಾಲ್ಕು ಗಂಟೆಗೆ ಏಳಬೇಕು ಬಹು ದೂರದಲ್ಲಿ ಕುಳಿತು ಹಿಡಿಯಬೇಕು ಕಡಿದವನಿಗೆ ಊರ ಪಂಚಾಯತ್ ದಿಂದ ದಂಡ ಹಾಕಿಸಿ ಇನ್ನೊಮ್ಮೆ ನಮ್ಮ ಗಿಡದ ಕಡೆ ಸುಳಿದಂತೆ ಮಾಡಬೇಕೆಂದು ನಿರ್ಧರಿಸಿದ. ನಿದ್ರೆ ಸುಳಿಯುತ್ತಿಲ್ಲ ಒಟ್ಟಾರೆ ಹಿಡಯಲೆಬೇಕು ಇದಕ್ಕೊಂದು ಅಂತಿಮ ಹಾಡಬೇಕೆಂದು ಕೋಳಿ ಕೂಗುವ ಮುನ್ನ ಎದ್ದ, ಊರೆಲ್ಲ ಜನ ನಿದ್ರೆ ಯಲ್ಲಿದೆ ಎಲ್ಲಿ ನೋಡಿದರೂ ಗಾಢ ಮೌನ, ಮತ್ತೆ ಮನದಲ್ಲಿ ತತ್ತರ. ಬಂದವನು ನನ್ನ ಮೇಲೆ ಎರಗಿದರೆ ಏನು ಮಾಡುವುದು ತಾನೂ ಕೈಯಲ್ಲಿ ಒಂದು ಕೊಡಲಿ ಹಿಡಿದ .ತಲೆಗೆ ರುಮಾಲು ಸುತ್ತಿ ಮೆಲ್ಲನೆ ಮನೆಯಿಂದ ಹೊರ ಬಂದ. ನಾಯಿಗಳು ಬೊಗಳಿ ಭಯ ಬೀಳಿಸುತ್ತಿದ್ದವು ಏನು ಮಾಡುವುದು ಗಟ್ಟಿಯಾದ ನಿರ್ದಾರ ಮಾಡಿಯೆ ಬಿಟ್ಟ ಹಿಡಿದು ತರಲೆ ಬೇಕು,ಶಿಕ್ಷೆ ಕೊಡಿಸಲೆಬೇಕೆಂದು ನಿರ್ದರಿಸಿದ. ಕಾಲುಗಳು ಹೊಲದ ಕಡೆ ಹೆಜ್ಜೆ ಹಾಕಲು ಪ್ರಾರಂಭಿಸಿದವು . ಇನ್ನೇನು ಹೊಲ ಸಮೀಪ ಬರಬೇಕನ್ನುವಾಗ ಮತ್ತೆ ತಲೆಯಲ್ಲಿ ಮಿಂಚಿ ಮರೆಯಾದದ್ದು .ಆ ಕುರಗಾಹಿ ತನ್ನ ಮೇಲೆರಗಿದರೆ ? ದೂರದಲ್ಲಿಯೆ ಒಂದು ಸಣ್ಣ ಕಂಟಿಗೆ ಒರಗಿ ಆ ಕುರಿಗಾಹಿ ಬರುವಿಕೆಗಾಗಿ ಕಾದು ಕುಳಿತೆ ಕುಳಿತಾ ಯಾವುದೆ ಕುರಹು ಇಲ್ಲ.ಬೆಳಕು ಎಲ್ಲ ಕಡೆ ಪಸರಿಸಲು ಪ್ರಾರಂಭಿತು ಮರ ಕಡೆಯಲು ಬರುವವನೆಂದು ಭಾವಿಸಿದ್ದವ ಬರಲೆ ಇಲ್ಲ ಮಾಡುವದೇನು.ಇವತ್ತು ಬದುಕಿದ ಬಡವ ಬಂದಿದ್ದರೆ ಪಂಚಾಯತ್ ಕಟ್ಟಿಗೆ ಏರಿಸುತ್ತಿದ್ದೆ ಎಂದವನೆ ಬಾರವಾದ ಮನಸ್ಸಿನಲ್ಲೆ ತನ್ನ ಹೊಲದ ಕಡೆ ಹೆಜ್ಜೆ ಹಾಕಿದ .ಗಿಡ ಬೋಳು ಗಿಡದ ಕೆಳಗಡೆ ಬಿಳಿಯ ಶರ್ಟನಂತೆ ಏನೋ ಕಾಣಲು ಪ್ರಾರಂಭಿಸಿತು. ಏನಿದು ಕಣ್ಣು ನನಗೆ ಮೋಸ ಮಾಡುತ್ತಿಲ್ಲ ತಾನೆ ! ಕ್ಷಣ ವಿಚಿಲಿತನಾದ. ಕೊಡಲಿ ಒಂದು ಕಡೆ ಸೊಂಟ ಮುರಿದು ಕೊಂಡು ಬಿದ್ದವ ಇನ್ನಂದು ಕಡೆ ಆತನ ಆರ್ತನಾದ ಕೇಳಿದ ಹನಮಂತನಿಗೆ ಬಿದ್ದವನನ್ನು ಗುರುತು ಹಿಡಿಯಲು ಬಹಳ ಸಮಯ ಬೇಕಾಗಲಿಲ್ಲ. ಆತ ಬೇರೆ ಯಾರು ಅಲ್ಲ  ಅದೆ ಊರಿನ ಬಡ ಕುರಿಗಾಹಿಯಾದ ಕಲ್ಲಪ್ಪ .ಹನಮಂತನ ಮಾನವೀಯತೆ ಜಾಗೃತವಾಯಿತು ಎಂತಹ ಕೆಲಸ ಮಾಡಿಕೊಂಡು ಬಿಟ್ಟೆ ಹುಚ್ಚಪ್ಪ ಎಂದವನೆ ನಿಧಾನವಾಗಿ ಎತ್ತಿ  ತನ್ನ  ಹೆಗಲಿಗೆ ಹಾಕಿಕೊಂಡು ಮನೆ ದಾರಿ ತುಳಿದ.ಮತ್ತೆ ಮನಸ್ಸಿನ ಆಳದಲ್ಲಿ ಕೋಲಾಹಲದ ದಾಳಿ  ಕಲ್ಲಪ್ಪ ಬಡವ ನಾಲ್ವರು ಮಕ್ಕಳ ತಂದೆ. ಬಡತನ ಮತ್ತು ಅಜ್ಞಾನ,ಬದಕಲು ಈಗ ಹಿಡಿದ ದಾರಿ ಸರಿಯಾಗಿ ಇರದಿದ್ದರೂ ಪರಿಸ್ಥಿತಿ ಕೈಗೊಂಬೆಯಾಗಿ ಮಾಡಿದ ಕಾರ್ಯ ಆತನನ್ನು ನರಕಕ್ಕೆ ತಳ್ಳಿತ್ತು .ಹನಮಂತನೇನು ಕೊಡುವದು ಶಿಕ್ಷೆ ನಿಸರ್ಗವೆ ನೀಡಿಯಾಗಿತ್ತು ಬಾರವಾದ ಹೆಜ್ಜೆ ಹಾಕುತ್ತಾ ಮನೆ ದಾರಿ ತುಳಿದ.

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...