ಕಿತ್ತು ತಿನ್ನುವ ಬಡತನದಲ್ಲಿಯೊ ಕತ್ತು ಎತ್ತಿ ನಡೆಯಲು ಇರುವ ದಾರಿ ಯಾವುದಾದರು ಇದೆಯಾ ಸರ್ ? ಹುಡುಗ ತನ್ನ ಮೇಸ್ಟ್ರಿಗೆ ಕೇಳಿದ. ಮೇಸ್ಟ್ರು ಹೇಳಿದರು "ಮಗು ಇದೆ ಆದರೆ ಅದು ಕಿರಾಣಿ ಅಂಗಡಿಗಿ ಹೋಗಿ ನಾಲ್ಕಾಣೆಯನ್ನು ಕೊಟ್ಟು ಬೆಲ್ಲ ತಂದಷ್ಟು ಸುಲಭವು ಅಲ್ಲ, ನಾನು ಹೇಳುವ ಹಾಗೆ ಅತಿ ದೊಡ್ಡದೂ ಅಲ್ಲ ಸದಾ ತಾಳ್ಮೆಯನ್ನು ಬೆನ್ನಿಗೆ ಅಂಟಸಿಕೂಂಡು ನಿತ್ಯ ಪರ್ವತ ಏರುವ ಶರ್ಪಾನ ಹಾಗೆ ಏರತಾ ಇರಬೇಕು .ಕಲ್ಲು, ಮುಳ್ಳು, ಕಮರಿಗಳಿಗೆ ಲೆಕ್ಕವೆ ಇಲ್ಲ ಸ್ವಲ್ಪ ಯಾಮಾರಿದರು ಪ್ರಪಾತ ಸೇರಬೇಕು.ಸರ್ ಅರ್ಥ ಆಯಿತು ಬಿಡಿ, ನೀವು ಹೇಳಿವುದು "ಚನ್ನಾಗಿ ಓದಬೇಕು, ಕಷ್ಟ ಪಟ್ಟು ಓದಬೇಕು,ಹೆಚ್ಚು ಅಂಕ ಗಳಿಸಬೇಕು ಇದೆ ಅಲ್ಲವೆ ನಿಮ್ಮ ಮಾತಿನ ಅರ್ಥ? " ಮೇಸ್ಟ್ರು ತಲೆ ಗಿರಗಿರಣೆ ತಿರುಗುವಂತೆ ಆಯಿತು ಯಾಕೆಂದರೆ ತಾವು ಸದಾ ಪಾಠ ಮಾಡುವ ದಾಟಿಯನ್ನು ಈ ಹುಡುಗ ದಾಟಿ ಹೋಗಿದ್ದಾನೆ ಎನಿಸಿತು .ಕಾರಣ ಮೇಸ್ಟ್ರು ಕೆಲಸ ಅಂದರೆ ಅದೆ ಅಲ್ಲವೆ ? ಮುಂಜಾನೆ 10 ಗಂಟೆಯಿಂದ 5 ಗಂಟೆಯವರೆಗೆ ಸನ್ಮಾರ್ಗದಲ್ಲಿ ಹೋಗಬೇಕು ಕಾನೂನು ಗೌರವಿಸಬೇಕು ಎನ್ನುವುದು ಇವರ ಮಂತ್ರ. ವಿಶೇಷವಾಗಿ ಕಲಾ ವಿಭಾಗದಲ್ಲಿ ಓದುವ ವಿದ್ಯಾರ್ಥಿಗಳು ಕೇಳುವುದೆ ಇದನ್ನಲ್ಲವೆ..! ಕನ್ನಡ ಭಾಷೆಯ ಮೇಷ್ಟ್ರು ಬರತಾರೆ ಅದರಲ್ಲಿ ಅನೇಕ ವಿದ್ವಾಂಸರು ದಾರ್ಶನಿಕರು ಹಾಗು ಕವಿ ಮತ್ತು ಸಾಹಿತಿಗಳು ಬರೆದ ಪಾಠಗಳನ್ನು ಹೇಳ್ತಾರೆ ಅವೆಲ್ಲ ನೈತಿಕ ಪಾಠಗಳೆ ಅಲ್ಲವೆ ! ಇನ್ನು ಇಂಗ್ಲಿಷ್ ಉಪನ್ಯಾಸಕರು ಬರತಾರೆ ಈ ದೇಶದ ನೈತಿಕ ಪಾಠಗಳು ಸಾಲದು ಅಂತ ಇಂಗ್ಲಂಡ್ ಅಮೇರಿಕಾದಂತಾ ದೇಶಗಳ ನೈತಿಕ ಕಥಗಳನ್ನು ಹೇಳುತ್ತರೆ.ಇನ್ನೂ ಇತಿಹಾಸ ವಿಷಯದ ಮೇಷ್ಟ್ರು ಬರತಾರೆ ಎಲ್ಲಾ ಧರ್ಮ ಗಳ ಅಂದರೆ ಹಿಂದೂ, ಮುಸ್ಲಿಂ,ಕ್ರೈಸ್ತ ಅಲ್ಲದೆ ಈ ದೇಶ ಜಗತ್ತಿನಲ್ಲಿ ಆಗಿ ಹೋದ ಎಲ್ಲಾ ಸಂತರ ಆದರ್ಶ ಗಳನ್ನು ಹೇಳುತ್ತಾರೆ.ಇನ್ನೂ ರಾಜ್ಯ ಶಾಸ್ತ್ರ ದ ಉಪನ್ಯಾಸಕರು ಬರುತ್ತಾರೆ ಪ್ಲೇಟೊ, ಅರಿಸ್ಟಾಟಲ್,ಕೌಟಿಲ್ಯ ನಂತ ದಾರ್ಶನಿಕರ ಬಗ್ಗೆ ಹೇಳುವರು. ಸಿದ್ದಾಂತ ಗಳಾದರು ಏನು ? ಕಲ್ಯಾಣ ರಾಜ್ಯ ಕಟ್ಟುವ ಮಾರ್ಗ ಗಳಲ್ಲವೆ. ಸಮಾಜ ಶಾಸ್ತ್ರ ದಲ್ಲಿ ಬರುವುದಾದರು ಏನು..! ಕುಟುಂಬ,ಸಮಾಜ ,ನಗರ ಹಳ್ಳಿಯ ಬದುಕು ಮನುಷ್ಯರು ಸಂತೋಷ, ಶಾಂತಿಗೆ ಬೇಕಾದ ಚೌಕಟ್ಟು ಗಳು ಮತ್ತು ಮಾರ್ಗೋಪಾಯಗಳು.ಪ್ರಕಾಶನ ಮಾತಿನ ವೇಗಕ್ಕೆ ಮೇಸ್ಟ್ರು ನಿರುತ್ತರರಾದಂತೆ ಕಂಡು ಬಂದರೂ ತನ್ನ ವೃತ್ತಿಯ ಬುಡವನ್ನೆ ಅಲುಗಾಡಿಸಿದಂತೆ ಆಯಿತು.ಮೇಷ್ಟ್ರು ಸುಧಾರಿಸಿ ಕೊಂಡು ಶಾಂತಚಿತ್ತದಿಂದ ತನ್ನ ಪಕ್ಕದ ಲ್ಲಿ ಆತನನ್ನು ಕುಳಿತುಕೊಳ್ಳುವಂತೆ ಹೇಳಿದರು.ಮಗು ಕತ್ತು ಎತ್ತಿ ನಡೆಯುವದು ಎಂದರೇನು ? ಮೇಷ್ಟ್ರ ಪ್ರಶ್ನೆಗೆ ಕ್ಷಣ ವಿಚಲಿತನಾದಂತೆ ಕಂಡರೂ ವಿವರಿಸಲು ಪ್ರಾರಂಭಿಸಿದ ಸರ್ ನಾನು ಎಲ್ಲರ ಹಾಗೆ ದುಡ್ಡು ಮಾಡಬೇಕು, ಒಂದು ಚನ್ನಾಗಿರುವ ಮನೆ ಕಟ್ಟಿಸಬೇಕು ,ಒಂದು ಕಾರು ಖರೀದಸಬೇಕು ಅಂದರೆ ಸಮಾಜದಲ್ಲಿ ತಲೆ ಎತ್ತಿ ತಿರುಗಬಹುದು ಹೀಗೆ ಪ್ರಕಾಶ್ ನ ಪಟ್ಟಿ ಬೆಳೆಯುತ್ತಾ ಹೋಯಿತು.ಆವಾಗ ಶ್ರೀಧರ ಮೇಸ್ಟ್ರು ಹೇಳಿದರು " ಮಗು ನೀನು ಈ ರೀತಿ ತಲೆ ಎತ್ತಿ ತಿರುಗಲು ಯಾವುದೆ ಕಾಲೇಜಿಗೆ ಬರಬೇಕು ಎಂದೇನು ಇಲ್ಲ. ನಗರದ ಯಾವುದೇ ಪುಟ್ ಪಾತನಲ್ಲಿ ಆಮ್ಲೇಟ್ ಮಾರುವವನು ಕೂಡಾ ಇವುಗಳನ್ನು ಹೊಂದಬಹುದು.ಅಂದರೆ ಆಮ್ಲೇಟ್ ಮಾರುವದು ತಪ್ಪು ಅಂತ ನನ್ನ ಮಾತಿನ ಅರ್ಥ ವಲ್ಲ . ತಲೆ ಎತ್ತುವುದು ಎನ್ನುವುದು ನೈತಿಕ ಜೀವನದ ಪರಾಕಾಷ್ಟೆ ಅದರ ಮೂಲಕ ವ್ಯಕ್ತಿತ್ವವೆನ್ನುವದು ನಿರ್ಮಾಣವಾಗುತ್ತದೆ. ಅದು ಒಂದು ಎರಡು ದಿನದಲ್ಲಿ,ವರ್ಷದಲ್ಲಿ ಅಥವಾ ಎರಡು ವಿಷಯ ಅಥವಾ ಭಾಷೆಯಿಂದ ನಿರ್ಮಾಣ ವಾಗುವದಲ್ಲ. ಅದರ ಬಲದಿಂದ ನಿರ್ಬಿಡೆ, ನಿರ್ಭಯ ಸೃಷ್ಟಿಯಾಗುತ್ತದೆ. ಅದರಿಂದ ತಲೆ ಎತ್ತಿ ತಿರುಗಬಹುದು ಮಗ . ಎಂದಾಗ ಪ್ರಕಾಶ್ ನ ಕಣ್ಣಲ್ಲಿ ನೀರು ಧಾರಾಕಾರವಾಗಿ ಇಳಯಿಯತು..! ಸರ್ "ನಾನು ವಿತಂಡ ವಾದ ಮಾಡಿ ತಮ್ಮ ನ್ನು ನೋಯಿಸಿದೆ ಕ್ಷಮಿಸಿ " ಕಾಲಿಗೆ ಎರಗಿದ ...ಶ್ರಿಧರ ಗುರುಗಳು ಹೇಳಿದರು "ಮಗು ,ಇರಲಿ ಭೌತಿಕ ವಸ್ತುಗಳೊಂದೆ ತಲೆ ಎತ್ತಿ ತಿರುಗುವ ಸಾಧನಗಳಲ್ಲ ಬದಲಾಗಿ ನೈತಿಕ, ಆಧ್ಯಾತ್ಮಿಕ ಜೀವನವು ತಲೆ ಎತ್ತಿ ತಿರುಗುವ
ಮಹಾನ್ ಅಸ್ತ್ರ ಗಳೆಂದಾಗ ಪ್ರಕಾಶ್ ನ ತಲೆಯಲ್ಲಿ ಜ್ಞಾನದ ಪ್ರಕಾಶ ಹೊರಹೊಮ್ಮಿತು.
ಬಸನಗೌಡ ಗೌಡರ
No comments:
Post a Comment