Friday, April 30, 2021

* ಮಿನಿ ಫಾಲ್ಸ್ *

ಪ್ರಕೃತಿ ನೀಡಿದ ಪಾಲ್ಸ್ ..!
ಪ್ರೇಮದಿಂದ ದುಮಿಕಿದೆ 
ಪಯಣವಿನ್ನು ದೂರವಿದೆ 
ತಾಯಿಗಿಂತ ಸಮ ಯಾವುದಿದೆ ?
ತಟ್ಟಿ ,ಬಟ್ಟೆ ಕಳೆದು ಸಿಟ್ಟಿನಿಂದ 
ಸುರಿದರೂ ಗಟ್ಟಿ ಪ್ರೇಮ ನೀಡಿದೆ//
ಯಾರಿಗುಂಟು ಯಾರಿಗಿಲ್ಲ ..!
ಪಡೆದವರು ಭಾಗ್ಯ ಶಾಲಿಗಳೆಲ್ಲ.
ಯಂಕ, ಕಲ್ಯಾ ,ಮಲ್ಯ ಕಬಡ್ಡಿ 
ಆಡಿದೆವಲ್ಲ ಕಾಲು ಎಳೆದು 
ಮೇಲೆ ಬಿದ್ದು ತುಳಿದು ಎಳದು 
ಅವುಟು ಮಾಡಿದರಲ್ಲ ...?
ತಾಯಿ ಒಂದೆ ಸುರಿದು ಎರೆದು 
ಪಾಸ್ ಮಾಡಿ ಹೊರಗೆ ಹಾಕಿದಳಲ್ಲ /
ತಿರುಗಿ ಬರದೆ ಹೋದರೆ 
ನೆನೆದು ಓಣಿ ತಿರುಗುವಳಲ್ಲ 
ತಾಯಿ ಪ್ರೀತಿ ಮೀರಿದ 
ಜಗವು ಇದ್ದರೆ ಹೇಳಿ !
ಜಗವು ಖಾಲಿ ಮಾಡುವಾ//

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...