ಮನೆಯಲಿ ಮಕ್ಕಳ ಕಲರವ ಸಪ್ಪಳ
ಮನೆ ಒಡತೆಯೆ ಎನಗಾಗಿಹಳು ಇಕ್ಕಳ
ಮೌನವಿದ್ದರೆ ಶಿಸ್ತಿನ ಪಾಠ ಹೇಳ್ತಾಳು//
ಮನೆ ಒಡತೆಯೆ ಎನಗಾಗಿಹಳು ಇಕ್ಕಳ
ಮೌನವಿದ್ದರೆ ಶಿಸ್ತಿನ ಪಾಠ ಹೇಳ್ತಾಳು//
ಗಾಳಿಯ ಗೂಳಿ ನುಗ್ಗದೆ ಕುಗ್ಗಿರುವೆ
ಕೃತ್ರಿಮಗಾಳಿ ದಾಳಿಗೆ ಬಸವಳಿದಿರುವೆ
ಮಳೆರಾಯ ಎಷ್ಟುದೂರ ಉಳಿದಿರುವೆ//
ಅಜ್ಜ ಕಟ್ಟಿದ ಕಲ್ಲು ಕಟ್ಟಿಗೆ ಶೇಷ್ಠ ಮನೆ
ಕೂಲರ ಬೇಡ ಕುಂತಾಗಿಲ್ಲ ಹನಾಹನಿ
ಕಾಂಕ್ರೀಟ್ ಹಾಕಿ ಸಂಕಟ ಪಡತೀನಿ//
ಬಿಸಿಲಿನ ಜಳಕೆ ಹಸಿವೆಯೆ ಹಾರಿದೆ
ಮೈ ಜುಳ ಜುಳ ನೀರು ಬಯಸಿದೆ
ಮಜ್ಜಿಗೆ ಮಡಿಕೆಯ ಮನ ಕೇಳುತಿದೆ//
ಪ್ರಿಜ್ಜು ಪಿಜ್ಜಾ ಬ್ಯಾಡ ಬೊಜ್ಜು ಬರತೈತಿ
ಅಜ್ಜಿಯ ಜೀರಗಿಯ ಮಜ್ಜಿಗಿನ ಸಾಕು
ಮಾಜಾಕಿಂತ ಮಸ್ತ್ ಮಜಾ ಬರತೈತಿ//
ತೆಂಗಿನ ಎಳೆನೀರು ಓರಿಜನಲ್ ಬಾಳಿ
ಬಟ್ಟಿ ಇಳಿಸಿದ ಮಾವು ಸಿಗಾತಾವೆಲ್ಲಿ
ಬಾಟಲಿ ಗೀಳು ಎಲ್ಲರಿಗೂ ಹಿಡದೈತಲ್ಲ//
ಬಸನಗೌಡ ಗೌಡರ
No comments:
Post a Comment