Saturday, July 31, 2021

ಕಾರ್ಗಿಲ್ ಕಲಿ

* ಕಾರ್ಗಿಲ್ ಕಲಿ *

ದೇಶ ಮುಕುಟ ಹಿಮ ಶಿಖರ ಮೇಲೆ
ಯಶ ಬಾವುಟ ಹಾರಿಸಿ ಕಾರ್ಗಿಲ್ ಕಲಿ/
ಇವನ ಬಿಸಿ ಉಸಿರಿನ ಕಣ ಕಣಗಳಲ್ಲಿ 
ಅರಳಿದೆ ದೇಶಭಕ್ತಿಯ ಪರಿಮಳ//

ವೈರಿ ಶಿರವ ಹರಿದು, ಜರಿಯ ನೀರು 
ತೊರೆಗಳಲ್ಲಿ ರಕುತ ಬಣ್ಣದೋಕುಳಿ/ 
ಜನರ ಹೃದಯದಲ್ಲಿ ಉಳಿದ ಕಣ್ಮಣಿ. 
ಇವನೆಮ್ಮ ಭಾರತೀಯ ಸದ್ಗುಣಿ//

ದವಳ ಹಿಮದ ಗಿರಿಯ ಚರಣದಲ್ಲಿ
ಹವಳದಂತೆ ಮಿನುಗಲಿವನ ಕಿರಣ/
ಭುವಿಯ ಮೇಲೆ ವೈರಿಗಳ ಮಾರಣ
ಇವನೆಮ್ಮ ಭಾರತೀಯ ವಜ್ರಗಣಿ//

ಜಾತಿ ಪಂಥ ಮೀರಿದ ಭಾವದಲ್ಲಿ ಸಂತ
ದೇಶಕ್ಕಾಗಿ ಪ್ರಾಣ ದಾನಗೈವ ಹುತಾತ್ಮ/
ವಿಷವರ್ತುಲ ಸೀಳಿ ಸಿಹಿ ತಂದ ಮಹಾತ್ಮ 
ಹೊಸ ಇತಿಹಾಸ ಬರೆದನು ಶಾಸ್ವತ//

                ಬಸನಗೌಡ ಗೌಡರ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...