Friday, July 30, 2021

* ನಾಕವರಳಿಸು ಧರಣಿಯಲ್ಲಿ *

ಯಾರಾದರೇನು ಆಳುವ ಅರಸ
ಯಾರಲ್ಲಿ ಭೇಧತಾರದ ಜಗವಿರಲಿ 
ನಾರಿಯೆ ನರನೆ ನಮಗಿಲ್ಲ ಚಿಂತೆ 
ಹರಿ ಬಂದು ಪವಡಿಸಬೇಕು ಅಲ್ಲಿ/

ಅರಳು ಹುರಿದಂತೆ ಸವಿ ಮಾತಾಡಿ
ಕೊರಳು ಕೊಯ್ಯಲು ಕೈ ಹಾಕದಿರಲಿ
ಹರಿತ ಆಯುಧ ಮಾಡಿರಿ ತಪ್ಪಿದಲ್ಲಿ
ಸರಿಯಾದ ಪಾಠವಾಗಲಿ ಕಣದಲ್ಲಿ/
 
ನಾಮ ಹೋಮ ಬಲದಿಂದ ಹತ್ತುವರು
ರಾಮನಾಳಿದ ಸೀಮೆಯ ಅಶ್ವ ಮೇಧ
ಸಮ ಪಾಲಿಗೆ ಕಾದಿರುವರು ಭರತರು
ಗಮನಿಸಿ ನಾಕವರಳಿಸಿ ಧರಣಿಯಲ್ಲಿ/

ರಾಗಿ ಬೆಳೆದವಗೂ ಸಿಗಲಿ ರಾಮರಾಜ್ಯ
ಬಾಗಿ ನಡೆದವರಿಗೂ ಬರಲಿ ಅಭಯ
ಸಾಗಿ ಹರಿದ ನದಿ ಸೇರಿವವು ಸಾಗರಕೆ
ಸಾಗದೆ ಸಂಗ್ರಹದ ಕೊಳೆ ಬೇಡ ಅಲ್ಲಿ /

                ಶ್ರೀ ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...