ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ
ವೇದಿಕಬರುವೆ ವನ ರಚನೆ ಸ್ಪರ್ಧೆ ಗಾಗಿ
ವೇದಿಕಬರುವೆ ವನ ರಚನೆ ಸ್ಪರ್ಧೆ ಗಾಗಿ
ಗುರುವೆ _ನುಡಿiನಮನ
* ಎರಗುವೆ ಗುರುವೆ *
ಎರಗುವೆ ಗುರುವೆ ನಿನ್ನಯ ಚರಣಕೆ
ಹರ ಹರಿ ಕಾಣುವೆ ನಿನ್ನಲಿ ಶಿರಬಾಗಿ/
ವರವ ನೀಡು ಗುರುವೆ ಶರಣು ಬರುವೆ
ಅರಿವಿನ ಅಲೆಗಳು ಬೀಳಲಿ ನಮಗೆ//
ಅಂದಕಾರ ಅಳಿಸು ಚಂದದಿಂದ ಬೆಳೆಸು
ಸುಂದರ ಬದುಕಿನ ಹಂದರ ಕೆಳಗಿಳಿಸು/
ವಂದಿಸಿ ಬೇಡುವೆ ಅಜ್ಞಾನವ ಅಳಿಸು
ಹೊಂದಿಸಿ ಸುಗುಣ ಕಲಿಸು ನಮಗೆ//
ಕಾಯದ ಮೇಲಿನ ಮೋಹ ಕಳಿಚಿಸು
ಗಾಯದ ಮೇಲಿನ ನೆನಪನು ಅಳಿಸು/
ಧ್ಯೇಯ ಒಂದೆ ದೇವರ ಕಾಣಲು ಕಲಿಸು
ಭಯ ಕರಗಿಸಿ, ಭಕ್ತಿಯ ಕಲಿಸು ನಮಗೆ//
ಅಕ್ಷರ ಜ್ಞಾನದ ಭಿಕ್ಷೆಯ ನೀಡಿ ರಕ್ಷಿಸು
ಸಾಕ್ಷರ ಸಾಲದು ಸಂಸ್ಕಾರ ಕರುಣಿಸು
ಭಕ್ಷಿಸುವ ರಕ್ಕಸರ ಬಲೆಗಳನು ತಿಳಿಸು
ಶಿಕ್ಷಿಸಿ ಸನ್ಮಾರ್ಗ ತೋರಿಸು ನಮಗೆ //
ಶ್ರೀ ಬಸನಗೌಡ ಗೌಡರ
ಉಪನ್ಯಾಸಕರು
ಬಾಲಕರ ಸ ಪ ಪೂ ಕಾಲೇಜು ಗುಳೇದಗುಡ್ಡ
ಉಪನ್ಯಾಸಕರು
ಬಾಲಕರ ಸ ಪ ಪೂ ಕಾಲೇಜು ಗುಳೇದಗುಡ್ಡ
No comments:
Post a Comment