Tuesday, July 20, 2021

*ತನ್ಮಯತೆ * ಚಿತ್ರ ಕವನ

 ಅಕ್ಷರಅಕ್ಷರ ದೀಪ ಸಾಹಿತ್ಯ,  ಸಾಂಸ್ಕೃತಿಕ ಮತ್ತು ಕಲಾ ವೇದಿಕೆಯ ಚಿತ್ರ ಕವನ ಸ್ಪರ್ಧೆ ಗಾಗಿ

*  ತನ್ಮಯತೆ *

ಕರಳು ಬಳ್ಳಿಯ ಹಣೆ ಬರಹಕೆಂದು
ಬೆರಣಿ ಇಲ್ಲದ ಬಿದಿರು ಬೊಂಬೆ ಬರಹ
ಬೆರಳಿನಿಂದರಳಿಸಿದೆ ಚಂದದ ಚಿತ್ರಗಳ
ಸರಳತೆ ಮೆರೆದೆ ನಿನ್ನೊಡಲ ಮಗವಿಗಾಗಿ//

ನೂರು ಕಷ್ಟದ ಬೇರುಗಳನು ಮೀರಿ 
ಸೂರು ಬಯಸದೆ ಶಿರವ ಬಾಗಿಸಿ
ಯಾರ ಗೊಡವೆ ಇಲ್ಲ, ಎಲ್ಲ ಕಲೆಗಾಗಿ 
ಕರ ತಾಳಹಾಕುತಿವೆ ನಿತ್ಯ ಕರ್ಮಕ್ಕಾಗಿ//

ತನ್ಮಯತೆಯು ತವರಿನ ಸಿರಿಯಂತೆ
ಜಾಣ್ಮೆಯೊಂದೆ ಸಂತಸದ ಕಣಜವಲ್ಲ
ಏನಿಲ್ಲದೆ ಎಲ್ಲವೊ ಪಡೆದು ಬಲ್ಲವಳು
ತಲ್ಲೀನಳಾಗಿ ಜಗ ಕೈಲಾಸ ಮಾಡಿದವಳು//
 
ಭಾವನೆ ಬಿತ್ತಿ ವೊರೆ ಕೊರೆ ಕೆತ್ತಿದವಳು 
ಭುವನದ ಮಾದರಿ ಮಾನವನಿಗಿತ್ತಳು
ಜೀವನ ಸಂದೇಶ ಮೌನದಿ ಹಾಡಿದಳು
ಯಾವ ಸಂತನಿಗೆ ಕಡಿಮೆ ಇಲ್ಲದವಳು//


             ಶ್ರೀ ಬಸನಗೌಡ ಗೌಡರ 

ಉಪನ್ಯಾಸಕರು ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ಗುಳೇದಗುಡ್ಡ 

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...