Tuesday, July 13, 2021

* ಜೀವ ಮಣ್ಣು - ಹೊಣ್ಣು*

ಸುಗ್ಗಿ ಕಾಲ ಇದ್ದಲ್ಲಿ  ಸುಳಿಯದು ಅಣ್ಣ 
ಹಿಗ್ಗಿ ಉಣಲು ಬಗ್ಗಿ ದುಡಿಯಬೇಕಣ್ಣ/
ಬೆವರು ಹನಿ ಬೇರಿಗಿಳಸಲು ಹಸಿರಣ್ಣ 
ಹವನವಲ್ಲ ಬಸವ ಗಂಟೆ ಕೇಳಿಸಲಣ್ಣ//

ಬೋಧಿಸದರೆ ಬರುವುದೇನು ಮೌಲ್ಯ   
ಅದನ್ನು ನಾವು ನಡದೆ ಕಲಿಸಬೇಕಣ್ಣ/ 
ಹೃದಯದಿಂದ ಪ್ರೀತಿ ಬಿತ್ತಬೇಕು ಅಣ್ಣ 
ಮೆದುಳಿನಿಂದ ಅಳತೆ ಮಾಡಬೇಕಣ್ಣ//

ಹದವಾದ ಮಣ್ಣಿನ ಶ್ರೀಗಂಧ ಪರಿಮಳ
ಬೀದಿಯಲ್ಲಿ ಸಿಗುವುದೇನು ಭರಮಣ್ಣ/
ಗದ್ದೆಯಲ್ಲೆ ಮಳೆ ಬಿದ್ದರೆ ಅದೆ ಹೊಣ್ಣು
ಪೆದ್ದ ನೀನು ತಯಾರಿಸು ಜೀವ ಮಣ್ಣು//

ಕೈಲಾಸವೆಂದು ಕರೆಯದು ಹೂ ತಂದು 
ಕೆಲಸದಿಂದ ಇಳಿಯಿವುದು ಇಳೆಗಿಂದು/
ಸಾಲಾಗಿ ನಡೆ ಇರಿವೆಯಂತೆ ಮುಂದೆ 
ಸಲಾಮು ಸಿಗುವುದು ಶ್ರಮದ ಹಿಂದೆ//

                   ಬಸನಗೌಡ ಗೌಡರ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...