Saturday, June 26, 2021

* ಪ್ರಕಾಶ್ ರ ಪಜೀತಿ *

           ಕೊರೋನಾ ಕಾಲಘಟ್ಟದಲ್ಲಿ ನಡೆಯುವ ಘಟನೆಗಳೆ ಹಾಗೆ ಒಂದಕ್ಕಿಂಥ ಒಂದು ಅಪರೂಪದ ಘಟನೆಗಳೆ, ಅಂತಹ ಒಂದು ಸ್ವಾರಸ್ಯಕರ ಘಟನೆ ನಡೆಯಿತು. ಪ್ರಕಾಶ ಸರ್ ಉತ್ತಮ ಉಪನ್ಯಾಸಕರು ಯಾವಾಗಲೂ ಕಾಲೇಜು ಕೆಲಸದಲ್ಲಿ ತಲ್ಲೀನ ಅಂದು ವಿದ್ಯಾರ್ಥಿಗಳು ತಮ್ಮ  ಪಾಲಕರ ಮೂಲಕ ನೀಡಿದ ಅಸೈನಮೆಂಟ ತರಲು ಕಾಲೇಜಿಗೆ ಹೋದರು ಎಲ್ಲಾ ವಿಷಯಗಳ ಅಸೈನಮೆಂಟಗಳು ಗುಡ್ಡದ ರೀತಿ ಟೇಬಲ್ ಮೇಲೆ ವಿರಾಜಮಾನವಾಗಿದ್ದವು ತನ್ನ  ವಿಷಯದ ಅಸೈನಮೆಂಟ  ಹುಡುಕುವದು ಕಷ್ಟದ ಕೆಲಸವೇನು ಆಗಲಿಲ್ಲ. ಕಾರಣ  ಶಿಸ್ತಿಗೆ ಹೆಸರಾಗಿದ್ದ ಕಮಲಮ್ಮ ಆಯಾ ವಿಷಯಕ್ಕೆ ಸಂಬಂಧಿಸಿದಂತೆ ಅಸೈನಮೆಂಟಗಳನ್ನು ಅದರ ಬಂಡಲ್ ಮೇಲೆ ವಿಷಯದ ಹೆಸರು ಬರೆದು  ಒಪ್ಪುವಾಗಿ ಜೋಡಣೆ ಮಾಡಿ ಇಟ್ಟಿದ್ದಳು. ತನ್ನ ಪಾಲಿಗೆ ಬಂದ ಪೇಪರಗಳನ್ನು ನೀಟಾಗಿ ತೆಗೆದು ಓಪನ್ ಮಾಡಲು ಹೆದರಕೆ ! ಅದರಲ್ಲೇನಾದರು ಕೊರೋನಾ ಬಂದರೆ ? ಸರಿ ಪ್ರಾಚಾರ್ಯರು ತಂದಿಟ್ಟ ಬಾಟಲಿ ಕಡೆಗೆ ನೇರವಾಗಿ ನಡೆದರು.. ಸೆನಿಟೈಜರ ಬಾಟಲಿ ಒತ್ತಿ ಕೈತುಂಬಾ ಸುರುವಿದರು ಪ್ರಕಾಶ, ತುಸು ಹೆಚ್ಚೇ ಎನ್ನುವಷ್ಟು ಕೈಗಳಿಗೆ ಸೆನಿಟೈಜರ್ ಹಾಕಿ ತನ್ನ  ಟೇಬಲ್ ಎದುರುಗಡೆ ಕುಳಿತು ಸರಾಗವಾಗಿ ಒಂದೊಂದಾಗಿ ಪೇಪರ್ ಮೌಲ್ಯಮಾಪನ ಮಾಡಿದರು. ಗಂಟೆ ಎರಡಾದರೂ ಹೊತ್ತು ಹೋದದ್ದೆ ತಿಳಿಯಲಿಲ್ಲ ಕಮಲಮ್ಮ ವೇಳೆಯಾಯಿತು ಎಂದು ಹೇಳುವುದಾದರು ಹೇಗೆ ? ಉಳಿದ ಉಪನ್ಯಾಸಕರು ತಮ್ಮ ತಮ್ಮ ಮೌಲ್ಯಮಾಪನದಲ್ಲಿ ತಲ್ಲೀನರಾಗಿದ್ದರು ಕೊನೆಗೆ ಕಪಾಟುಗಳ, ಟಾಕಿಗಳ, ಗ್ಲಾಸಗಳ ಸಪ್ಪಳ ಅಧಿಕವಾದಾಗ ವೇಳಯ ಗಮನ ಎಲ್ರಿಗೂ ಬಂದದ್ದು. ಎಲ್ಲರೂ ಅವಸರ ಅವಸರವಾಗಿ ಬಂಡಲ್ ಕಟ್ಟಿ ಮನೆಯ ದಾರಿ ಹಿಡಿದರು .ಪ್ರಕಾಶ ಸರ್ ಕೂಡಾ ದಾರಿ ಬದಿಯಲ್ಲಿ ಕಂಡ ನಾಲ್ಕಾರು ಕಾಯಿಪಲ್ಲೆ ತೆಗೆದುಕೊಂಡು  ಮನೆ ತಲುಪಿದಾಗ ಗಂಟೆ ಎರಡೂವರೆ ತೋರಿಸುತ್ತಿತ್ತು .ಅವಸರವಾಗಿ ಬಾತರೂಮಿಗೆ ತೆರಳಿ, ತಿಕ್ಕಿರಿ ತಿಕ್ಕಿರಿ...ಅಂತಾರಲ್ಲ ಹಾಗೆ ಸಾಬೂನ ಹಚ್ಚಿ ಕೈತೊಳೆದಾಗ ಗಡಿಯಾರದ ದೊಡ್ಡ ಮುಳ್ಳು ಮೂರಕ್ಕೆ ಮುತ್ತಿಕ್ಕಲು ರಡಿಯಾಗಿತ್ತು ಅವತ್ತು ಕಾರು ಹುಣ್ಣಿಮೆ ಬೇರೆ ಒಂದರ ಮೇಲೆ ಒಂದರಂತೆ ಮೂರು ಹೋಳಗೆ ತಿಂದು ಗಡದ್ದಾಗಿ ಎದ್ದಾಗ ಮೂರುವರೆ ದಾಟಿ ಮುಳ್ಳು ನಾಲ್ಕು ಗಂಟೆಯ ಕಡೆ ಮುಖ ಮಾಡಿತ್ತು .ಇನ್ನು ಹಾಸಿಗೆ ಕಡೆ ಹೋಗುವುದಾದರೆ ಹೇಗೆ ? ಮತ್ತೆ ಪೇಪರ ಕಡೆ ಮುಖ ಮಾಡಿದರು ಪ್ರಕಾಶ್ . ಇನ್ನೇನು ಎರಡು ಪೇಪರ ತಿದ್ದಿಲ್ಲ ಮುದ್ದಿನ ಮಡದಿ ನುಲಿಯುತ್ತ ಹತ್ತಿರ ಸಾಗಿ  "ಸಾಕ ಬಿಡ್ರಿ ಎಷ್ಟು ದುಡಿತೀರಿ ರೆಷ್ಟ ಮಾಡರಲ್ಲಾ ಎಂದಳು.ಹತ್ತಿರ ಬಂದ ಗೀತಾಳಿಗೆ ಇವತ್ತು ಏನೊ ವಿಶೇಷ ಕಾಣಿಸಿತು.ಪ್ರಶ್ನೆ ಮಾಡಿಯೇ ಬಿಟ್ಟಳು ಅಲ್ಲ ರಿ ಇವತ್ತು " ಘಮ್ ಘಮಾ ಸೇಂಟ ವಾಸನೆ ನಿಮ್ಮಿಂದ ಹೊರಹೊಮ್ಮಲು ಹತ್ತಿದೆ ! "ಏನು ವಿಶೇಷ ಎಂದಳು ಯಾವುದಾದರು ಕಾರ್ಯಕ್ರಮಕ್ಕೆ ಹೋಗಿದ್ರೇನು?" ಹೆಂಡತಿ ಈ ವಿಪರೀತವಾದ ಪ್ರಶ್ನೆಗೆ ಸಿಡುಕಿದ ಪ್ರಕಾಶ ಪೇಪರ ತಿದ್ದಿ ಸಾಕಾಗೈತಿ ಇನ್ನೆಲ್ಲಿ ತಂದಿ ಸೇಂಟ್..! ಪೇಪರ್ ತಿದ್ದಿ ಬೆವರು ಇಳದೈತೆ ...ನಿನಗ ಸೇಂಟನ ಹುಚ್ಚ ಹಿಡದೈತಿ ನಡಿ. ಎಂದು ಗದರಿಸಿದರು. ನಿಮಗ ಪೇಪರ ಬಂದಾವ ಇಲ್ಲಾ ಯಾರಗ್ಯಾರ ಬಂದಾವ...ತಿದ್ದರಿ ಒಬ್ಬರ ಕುತಗೊಂಡ, ಸದಾಶಿವಗ ಅದೆ ಧ್ಯಾನ ಅಂತಾರಲ್ಲ ಒಬ್ಬರ ಕುಂದರ್ರಿ ಎಂದು ಸರಸರ ಒಳ ನಡೇದಳು ಗೀತಾ. ಪ್ರಕಾಶನ ತಲೆಯಲ್ಲಿ  ಹುಳು ಹೊಕ್ಕ ತಿರುಗಲು ಪ್ರಾರಂಭವಾಯಿತು .ಗೀತ ಹೀಗೇಕೆ ಹೇಳಿದಳು... ನಾನು ಸೇಂಟ ಎಂದರೆ ಮಾರು ದೂರ ಸರಿಯುವವನು ನನಗೆ ಸೇಂಟ ಹಚ್ಚಿದೆ ಎಂದು ಏಕೆ ಹೇಳಿದಳು ! ಮರಕುಟಕನು ಮರಕುಕ್ಕಿದ ಹಾಗೆ ಗೀತನ ಮಾತು ಕುಕ್ಕಲು ಪ್ರಾರಂಭವಾಯಿತು.ತಕ್ಷಣವೇ ಜ್ಞಾನೋದಯ ಯುರೇಕಾ ಯುರೇಕಾ... ಗೀತಾ ಎಲ್ಲಿದೀಯಾ ನೆನಪಾಯಿತು ಏನ್ರಿ ಅದು ಯುರೇಕಾ "ಇವತ್ತು ಕಾಲೇಜಿನಲ್ಲಿ ಅವಶ್ಯಕತೆಗಿಂತ ಹೆಚ್ಚೆ ಸೆನಿಟೈಜರ ಕೈಗೆ ಮೆತ್ತಿ ಕೊಂಡಿದ್ದೇವೆ" ಅದರ ಸುವಾಸನೆ ಇದೆಲ್ಲದಕ್ಕೆ ಕಾರಣ ! ಅದುವೆ ನಿನಗೆ ಸೇಂಟ ಆಗಿ ಹೊರಹೊಮ್ಮಿದೆ ಕನೆ ಆಗಲೆ ನೆನಪು ಆಗಿದ್ದರೆ ಹೀಗಾಗುತ್ತಿರಲಿಲ್ಲ. ಎಂದಾಗ ಗೀತಾ ಸುಸ್ತೊ ಸುಸ್ತು. 


                  ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...