Tuesday, September 14, 2021

* ಇದು ಸಂತೆ *

ಈ ಲೋಕದ ಜನರ  ನಿಯಮ 
ಹೀಗೂ ಉಂಟು ! ಹೇಳುವರು ಬೋಧಕರಾಗಿ,        ನಿಲ್ಲಬೇಕು ಸಿಂಗಲ್  ಸ್ಟಾಂಡ್ ಮೇಲೆ ! 
ಅಲುಗಾಡಲು ಬೇಡ ಬೀಳುವುದು ಗಾಡಿ 
ಮಾಡ ಬೇಡ ಗಡಿ ಬಿಡಿ.
ಕೇಳುವವರೆ ಕೋಡಿ !  
ಹೇಳುವವರಿಗೇನು ದಾಡಿ , 
ಯಾವಾಗಲೂ ಡಬಲ್ ಸ್ಟಾಂಡ್ 
ಮೇಲೆ ಇವರ ಗಾಡಿ.! 
ತಿಳಿಯುವುದು ಹೇಗೊ ಕೋಡಿ ? 
ಒಂದು ಮರೆ ಮಾಡಿ ಇನ್ನೊಂದರಿಂದಲೆ ಮೊಡಿ ...
ಏನು ಮಾಡುವುದು ? 
ಹಾಕು ಶಿಕ್ಷಣವೆಂಬ ನಿನ್ನದೆ ಸ್ವಂತ ಕನ್ನಡಿ
ಆದರ್ಶಗಳೆಂಬ ರೆಕ್ಕೆಗಳ ಧಾರಣೆ 
ಅದಕೆ ಸಿಂಗಲ್ ಸ್ಟಾಂಡೆ ಹೊಣೆ 
ಬದುಕೆಂಬ ಬಂಡಿಗೆ ಹಾಕಬೇಕು  
ಪ್ರ್ಯಾಕ್ಟಿಕಲ್ ಸ್ಟಾಂಡ್  ಮುಂದೆ. 
ಅದು ಹೇಗೆ ಬರುತ್ತೆ ತಂದೆ ! 
ಬರುವುದೇನು ಬಂತು ? 
ಕಲೆ ಬೇಕು ಇಲ್ಲದಂತೆ  ತೋರಿಸು ಇದು ಸಂತೆ....
ಎಲ್ಲಾ  ಇದ್ದು ಇಲ್ಲದಂತೆ  ಮುನ್ನಡೆಯಬೇಕು ! ಕಾಣದಂತಿರಬೇಕು.ಕವಿಯಾಗಬೇಕು 
ರವಿ ಕಾಣದ ಕಣಿವೆಯೊಳು ಕಿರಣ ಹರಿಸಬೇಕು .

       ಬಸನಗೌಡ ಗೌಡರ

1 comment:

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...