Wednesday, September 29, 2021

* ನಿನಗೂ ಒಂದು ದಿನ *

ದನಿವರಿಯದ ಧಣಿಯೆ  
ನಿನಗೆ ನನ್ನ ಶರಣು / 
ಹಗಲೇನು ಇರುಳೇನು 
ಹೆಗಲಾಗಿ ದುಡಿದೆ /
ಕೂಗಲಿಲ್ಲ ಕಿರುಚಲಿಲ್ಲ 
ಸಾಗಿತಲ್ಲ ನಿನ್ನ ದುಡಿಮೆ/
ಓಡಿದಾಗ ಓಡಿದೆ 
ನಡೆದಾಗ ಹಾಡಿದೆ /
ನೀನಾರಿಗೇನು 
ಕಡಿಮೆ /
ಜೀವಕಳೆಯ ಹೊರಸಿ  
ಮೂಲೆ ಮೂಲೆ ಕಳುಹಿಸಿ/
ಮಾಲೆ ಬಯಸದ 
ಕೋಲೆಯ ಬಸವ /
ನನ್ನ ಅರಗಿಣಿಗೂ 
ನೀನೇ ಮುದ್ದು ಮಣಿ/ 
ಕದ್ದು ಬೀಗುವಳು 
ನನ್ನ ಹಿಂದೆ ರಮಣಿ 
ನೀನಗೂ ತಂದರಲ್ಲ 
ಒಂದು ದಿನ.... ! 
ಮೆಲುಕು ಹಾಕದ ದಿನಗಳಲ್ಲಿ /
ದಿನಕರನ ಆಣೆ 
ಅವನಿ ಇರದ 
ದಿನ ನನ್ನ ನಿನ್ನ 
ಮರಣ/  


ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...