Friday, October 1, 2021

* ನಾನಾಗುವೆ ತೃಪ್ತ *

ನಾ ಕಲಿಸುವೆ ಎನ್ನುವುದೇ 
ಒಂದು ಭ್ರಮೆ ...!
ಕಲಿಯಲು ಇವರಿಗಿಲ್ಲ 
ಅರ್ಹತೆ ಎನ್ನುವುದು ಒಂದು ಅಕ್ಷಮ್ಯ..!
ಕಲಿಸುವುದು ಏನಿದೆ ?
ಪುಸ್ತಕದ ಅಕ್ಷರ, ಅಂಕಿಗಳ ಮಾಲೆ ? 
ನಾ ಮೊದಲು ನೋಡಿದೆ 
ನಂತರ ಬಾಯಿ ತೆರೆದೆ.. 
ಅಷ್ಟರಲ್ಲಿ ಕಲಿಸಿದೆ ಎನ್ನುವ ಪಿತ್ತ 
ನೆತ್ತಿಗೇರಿದರೆ.... ಅವನೊಬ್ಬ ಹುತಾತ್ಮ !
ಕಲಿಸಿದ ನಾನೊಬ್ಬ  ಪ್ರೇತಾತ್ಮ!
ಪ್ರೀತಿ ಇಲ್ಲದ ಪಾತ್ರ ಯಾರು ಮಾಡಿದರೇನು ?
ಭಕ್ತಿಯಿಲ್ಲದ ತೀರ್ಥ ಯಾತ್ರೆ 
ಶಕ್ತಿ ಯಿಲ್ಲದ ಸೈನಿಕನ ದಂಡ ಯಾತ್ರೆ 
ಆಗ ನಾನೊಬ್ಬ ಕೆಂಭೂತ ! 
ಕೈಯಲ್ಲಿ ಕೋಲು 
ಮುಖವೆಲ್ಲ ಜೋಲು 
ನಿದ್ದೆಕಣ್ಣಿನಲ್ಲಿ ಗುಣಗುಣಿಸಿದರೆ 
ನಿನ್ನ  ಪಾಲಿಗೆ ನಾನೊಬ್ಬ ಹದ್ದು 
ಇದಕ್ಕೆ ಯಾರಲ್ಲಿ ಇಲ್ಲ ಮದ್ದು.
ನನ್ನ ನೋಡಿಯೇ ನೀನು 
ಕಲಿಯಬೇಕು ಬದುಕಿನ ಲೆಕ್ಕ 
ಆಗ ನಾನೊಬ್ಬ ಗುರು ಪಕ್ಕಾ
ಅಳಿಸಲಾಗದ ಕಪ್ಪು
ಯಾರೆ ಬಳಸಿದರೂ ಅದು ತಪ್ಪು 
ಅಪ್ಪಿ, ಒಪ್ಪಿಕೊಂಡು ಮಾರ್ಗದರ್ಶನ, 
ಮಾಡಿದಾಗ ನಾನಾಗುವೆ ತೃಪ್ತ //


        ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...