Saturday, October 2, 2021

*ತತ್ವ ಬಲದ ಮಹಾತ್ಮ *

ಬುದ್ಧ ,ವರ್ಧಮಾನ ನೀಡಿದ 
ಸಿದ್ಧೌಷದ ಸೇವಿಸದೆ ಸೊರಗಿದರು, 
ಕೊರಗಿದರು ಸಾವಿರ ಸಾವಿರ ತಲೆಮಾರು../ 
ಆಸೆ, ದ್ವೇಷ, ಅಸೂಯೆ, ಹಿಂಸೆಖಯಂಬ.          ರೋಗದಿಂದ....../
ಅರಿತು ಔಷದ  ಅರುಹಿದ 
ಗಾಂಧಿಯೆಂಬ ಅಮರ ವೈದ್ಯ./ಜ 
ಗುಲಾಮಗಿರಿಯ ಸಲಾಮು ಸಾವಿರದ ಸಾವಿರ ಕನಸುಗಳು ಸಮಾಧಾನಕ್ಕೆ 
ಕಳಚಿ ಸಂಕೋಲೆ  ಹರಿಯಲು 
ಹೆಣೆದ ಬಲೆ ಸತ್ಯಾಗ್ರಹವೆಂಬ 
ಸತ್ಯದ ಮಹಾ ಅಸ್ತ್ರ ../ಗಿರಡ್ಡಿ 
ತತ್ವ ಬಲದ ಮಹಾತ್ಮ
ದೇಶಕ್ಕಾದ ಹುತಾತ್ಮ 
ಸ್ವಾತಂತ್ರ್ಯ ಪಡೆದ ಭಾರತೀಯ 
ಈಗ ಧನ್ಯಾತ್ಮ //
ಗಲ್ಲಿ ಗಲ್ಲಿ ಗಳಲ್ಲಿ ಮಾಡಿದೆವು
ಮೂರ್ತಿಗಳ ಪಾರುಪತ್ಯ 
ತತ್ವಗಳೆಮಗೆ ಅಪತ್ಯ !
ತಾತಾ ನಿಮ್ಮ  ಜಯಂತಿಯಂದು 
ನಮಗೆ ಆದರ್ಶ ಪಟ್ಟಿ ನೀಡದವರೆ 
ಈಗ ನಾಪತ್ಯೆ ..!

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...