*ಮಗು ಮನುಷ್ಯನ ತಂದೆ *
ಮಾನವನ ವಿಕಾಸ , ಅದು ನಿರಂತರವಾಗಿ ಬಹುಕಾಲದಿಂದ ನಡೆದುಕೊಂಡು ಬರುತ್ತಿದೆ .ಅದು ಪ್ರಕೃತಿಯ ಸಹಜ ಪ್ರಕ್ರಿಯೆಯೂ ಕೂಡಾ ಹೌದು, ಒಂದು ತಲೆಮಾರಿನ ಜನಾಂಗದ ಜನರನ್ನು ಇನ್ನೊಂದು ತಲೆಮಾರಿನ ಜನರಿಗೆ ಹೋಲಿಕೆ ಮಾಡಿ ನೋಡಿ ... ಸೂಕ್ಷ್ಮವಾಗಿ ಗಮನಿಸಿದರೆ ನಮಗೆ ಅರ್ಥ ವಾಗುತ್ತದೆ ಅವರ ಯೋಚನಾ ಲಹರಿ ,ನಿರ್ಧಾರ ತೆಗೆದುಕೊಳ್ಳವ ಶಕ್ತಿ, ತಾರ್ಕಿಕತೆ, ನಿಖರತೆಯಲ್ಲಿ ಬದಲಾವಣೆಯನ್ನು ಕಾಣಬಹುದು. ನಾನು ಇಲ್ಲಿ ಯವರೆಗೆ ಈ ಪೀಠಿಕೆ ಹಾಕಿದ್ದು ಏಕೆಂದರೆ ನಾನೊಂದು ಅಪರೂಪದ ಘಟನೆಯನ್ನು ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ಅದೇನೆಂದರೆ ನನ್ನ ವಿದ್ಯಾರ್ಥಿ ಜೀವನದಲ್ಲಿಯ ಘಟನೆ. ಮೂಲತಃ ನಾನು ಹಳ್ಳಿಯ ಹುಡುಗ ಹೀಗಾಗಿ ದಡ್ಡನೂ ಅಲ್ಲದ ಜಾಣನೂ ಅಲ್ಲದ ಮಧ್ಯಮ ಕೆಟಗೆರಿಗೆ ಸೇರಿದ ವ್ಯಕ್ತಿ . ಹಲವಾರು ಏಳು ಬೀಳುಗಳನ್ನು ಕಂಡು ಬೋಧಕನಾಗುವ ಹಂತಕ್ಕೆ ಬಂದು ತಲುಪಿದ್ದು. ಆ ಮಾತು ಹಾಗಿರಲಿ, ಹಳ್ಳಿಯ ಬದುಕು ಅಂದರೆ ವ್ಯಾಜ್ಯಗಳು ಕೂಡಾ ಸಾಮಾನ್ಯ ಅದು ಆಸ್ತಿಗೆ ಸಂಬಂಧಿಸಿದ ಸಿವಿಲ್ ತಕರಾರು ,ನಮ್ಮ ಮನೆಗೂ ಅಂಟಿಕೊಂಡಿತ್ತು ಹಾಗಾಗಿ ಅಪ್ಪ ಶಹರಿನಲ್ಲಿ ಒಬ್ಬ ವಕೀಲರನ್ನು ತನ್ನ ವಕಾಲತ್ತು ವಹಿಸಲು ಗೊತ್ತು ಮಾಡಿದ್ದರು.ಆಗ ನಾನು ಡಿಗ್ರಿ ಮಾಡುತ್ತಿದ್ದ ಸಮಯ.ನನಗೆ ವಕೀಲರ ಮನೆಗೆ ಹೋಗುವ ಸನ್ನಿವೇಶ ಬಂದಿತ್ತು, ಹಾಗಾಗಿ ನನ್ನ ಕ್ಲಾಸ್ ಮುಗಿಸಿ ವಕೀಲರ ಮನೆ ತಲುಪಿದಾಗ ಗಂಟೆ 2.00 ತೋರಿಸುತ್ತಿತ್ತು.ಅವರ ಬಾಗಿಲಲ್ಲಿ ನಿಂತು ವಕೀಲರ ಬಗ್ಗೆ ವಿಚಾರಿಸಿದಾಗ ಅವರು ಅದಾಗಲೇ ಊಟ ಮಾಡಿ ನಿದ್ರೆಗೆ ಜಾರಿದ್ದರು, ಒಂದು ಗಂಟೆ ಕಾಯಲು ಸೂಚಿಸಿದರು .ಸರಿ ಒಂದು ಗಂಟೆಯ ಅವಧಿಯಲ್ಲಿ ಹೋಗುವದೆಲ್ಲಿಗೆ ? ಹೋಗಲು ಅರ್ಧ ಗಂಟೆ ,ಮರಳಿ ಬರಲು ಅರ್ಧ ಗಂಟೆ ಹಾಗಾದರೆ ಹೋಗುವುದಾದರೂ ಏಕೆ ? ಅಕಸ್ಮಾತ್ ಹೋಗುವ ಮನಸ್ಸಾದರೆ ಹೋಗಬಹುದೇನೋ,ಹೋದರೆ ಹೋಟೆಲ್ ಕಡೆ ಮುಖ ಮಾಡಬೇಕು ಹೋಟಲ್ ನಲ್ಲಿ ಪ್ರವೇಶ ಮಾಡಿದರೆ ಹಾಗೆ ಮರಳಿಲಿಕ್ಕೆ ಆಗುತ್ತಾ ? ದುಡ್ಡ ಅಂತೂ ಬೇಕೆ ಬೇಕು ,ಆದರೆ ನನ್ನಲ್ಲಿದ್ದ ದುಡ್ಡಾದರೂ ಎಷ್ಟು, ಅದು ಚೂರು ಪಾರು. ಅದನ್ನು ಅತ್ಯಂತ ಚೌಕಾಸಿಯಲ್ಲಿ ಬಳಸುವ ವಿದ್ಯಾರ್ಥಿ ನಾನು,ಇನ್ನೊಂದು.... ಬಳಸಿದರೂ ಅದು ಆರೋಗ್ಯವಂತ ಆಹಾರವಾಗಲು ಸಾಧ್ಯವಿಲ್ಲ .ಹೋಟೆಲ್ ಗಳೆಂದರೆ ಅವುಗಳು ನಿರಾಶ್ರಿತರ ಆಶ್ರಯ ಸ್ಥಾನಗಳೆಂದು ಗೆಳೆಯರ ಮುಂದೆ ಜಂಭ ಕೊಚ್ಚಿ ಕೊಂಡವನು ನಾನು,ಹೀಗಾಗಿ ಒಂದು ಗಂಟೆಯ ಅವಧಿ ಅಲ್ಲಿಯೇ ಕಳೆಯುವ ನಿರ್ಧಾರ ಮಾಡಿದೆ.ಸರಿ ,ಸಪ್ಪೆ ಮುಖ ಮಾಡಿ ಕುಳತಾಗ ಬಡ ಭಾರತೀಯ ರೈತನ ಸುಡಗಾಡು ಬಾಳು ಕಣ್ಣು ಮುಂದೆ ಸುಳಿದಾಡ ಹತ್ತಿತು. "ವಡ್ಡ ಮಾಡಿದ ಹೆಂಡಕೆ ರೈತ ಮಾಡಿದ ದಂಡಕೆ ಹಾರವ ಮಾಡಿದ ಪಿಂಡಕೆ" ನಮ್ಮ ಅಪ್ಪನ ಮಾತು ನನ್ನ ತಲೆಯಲ್ಲಿ ಗಿರಕಿ ಹೊಡಿಯ ಹತ್ತಿತು ಅದು ಕಾಕತಾಳೀಯವೋ ಏನು ನಾನು ಯಾರಿಗಾಗಿ ಕಾಯಲು ನಿಂತಿದ್ದೇನೋ ಆ ವಕೀಲರೂ ಕೂಡಾ ಬ್ರಾಹ್ಮಣರೆ ಆಗಿದ್ದರು .ಅದು ಅವರ ತಪ್ಪಲ್ಲ ಅದು ಬುದ್ಧಿ ಸಮರ್ಪಕವಾಗಿ ಬಳಸದ ರೈತನದಾಗಿದ್ದರೆ ಅದಕ್ಕೆ ಯಾರು ಹೊಣೆಗಾರುರು ? ಅದು ಉತ್ತರ ಸಿಗದ ಪ್ರಶ್ನೆ. ನನ್ನ ಲೇಖನದ ಉದ್ದೇಶ ಅದಲ್ಲ ,ಬದಲಾಗಿ ಆ ಅವಧಿಯಲ್ಲಿ ನಡೆದ ಒಂದು ಸನ್ನಿವೇಶ ಈಗ ಬರೆಯಲು ಹೊರಟಿರುವುದು ಆ ವಕೀಲರ ಮನೆಯಲ್ಲಿ ಒಂದು ಅಥವಾ ಎರಡನೇಯ ವರ್ಗದ ವಿದ್ಯಾರ್ಥಿ ಇರಬಹುದುನೋ ಕಾರಿಡಾರ್ ನಲ್ಲಿ ಚಿತ್ರ ಬಿಡಿಸುತ್ತ ಕುಳಿತುಕೊಂಡಿತ್ತು ಬಹು ಚೂಟಿಯಾದ ಹುಡುಗ,ಮುದ್ದು, ಮುದ್ದಾಗಿದ್ದ ,ನೋಡಿದರೆ ಮಾತಾಡಿಸಬೇಕು ಎಂಬ ಹಂಬಲ ಉಂಟಾಗುವಂತಿದ್ದ. ಆತ ಇಂಗ್ಲಿಷ್ ಮೀಡಿಯಂ ದಲ್ಲಿ ಓದುತ್ತಿದ್ದ ಹುಡುಗ ಎಂದು ತಿಳಿಯಲು ಬಹಳ ಟೈಮ್ ತೆಗೆದು ಕೊಳ್ಳಲಿಲ್ಲ ,ಏಕೆಂದರೆ ವಕೀಲರ ಮಗನಲ್ವಾ. ಇರಲಿ, ಚಿತ್ರ ಬಿಡಿಸಿ ಅದಕ್ಕೆ ಬಣ್ಣ ಹಚ್ಚುವ ಕಾರ್ಯ ದಲ್ಲಿ ಆತ ಮಗ್ನನಾಗಿದ್ದ. ಆತನ ಏಕಾಗ್ರತೆಗೆ ನಾನು ತಲೆದೂಗಿದೆ.ಜಗತ್ತಿನ ಪರಿವೆಯೂ ಇಲ್ಲದೆ ಅದರಲ್ಲಿ ಮಗ್ನನಾಗಿದ್ದ. ಅದಕ್ಕಾಗಿಯೇ ಆತ ಜಾಣನಾಗಿದ್ದಿರಬಹುದು "The difference between man and man is the power of concentration " ಎಂದು ಸ್ವಾಮಿ ವಿವೇಕಾನಂದರು ಇದಕ್ಕೆ ಹೇಳಿದ್ದಿರಬಹುದು. ನಾನು ಆತನನ್ನು ಪ್ರಶ್ನೆ ಮಾಡಿದೆ ಮಗು ಚಿತ್ರ ಬಿಡಿಸುತ್ತಿದ್ದೀಯಾ? ಮಗು ತಲೆ ಅಲ್ಲಾಡಿಸಿತು, ಹೌದೆಂಬತೆ. ನನಗೂ ವೇಳೆ ಕಳೆಯಬೇಕಾಗಿತ್ತು. ಮಕ್ಕಳ ಜೋತೆ ಕಾಲ ಕಳೆಯುವದೆಂದರೆ...ಅದು ಸ್ವರ್ಗದ ಅನುಭವ, ಅದು ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ ನಾನಂತೂ ಸ್ವರ್ಗದ ಅನುಭವ ಕಂಡಿದ್ದೇನೆ. ಇರಲಿ ನನಗೆ ಇಂಗ್ಲಿಷ್ ನಲ್ಲಿ ಪ್ರಶ್ನೆ ಕೇಳಬೇಕೆನಿಸಿತು .ಕೇಳುವುದೇನು ? ಚಿತ್ರ ಬಿಡಿಸುವಾಗ ಸರಾಗವಾಗಿ ಚಲಿಸುವ ಆತನ ಬೆರಳುಗಳನ್ನು ನೋಡಿ,ಅದರ ಬಗ್ಗೆ ಪ್ರಶ್ನೆ ಮಾಡೋಣ ಎಂದು "How many fingers have you? ಎಂದೆ. ತಕ್ಷಣವೇ ಹುಡುಗ " I have ten fingers in my two hand " ಎಂದ. ನಾನು ಕ್ಷಣ ವಿಚಲಿತನಾದೆ, ಏಕೆಂದರೆ ಆತನ ಖಚಿತ ಉತ್ತರದಿಂದ... ! ಬೆರಳುಗಳೆಂದಾಗ 20 ಹೇಳಬಹುದಿತ್ತಲ್ಲವೆ ...! ತನ್ನ ಉತ್ತರದಿಂದ ನನ್ನ ಪದವಿ ಕಲಿಕೆಯ ಬೇರುಗಳನ್ನು ಬುಡಮೇಲು ಮಾಡಿ,ಮಗು ಮನುಷ್ಯನ ತಂದೆ ಯಾಗಿದ್ದ. ಮುಂದುವರಿದು ಪರಿಪೂರ್ಣತೆಗೆ ಮತ್ತೆ ಮತ್ತೆ ಪ್ರಯತ್ನ ಮಾಡಲು ಪ್ರೇರಣೆಯಾಗಿದ್ದ .ಹಾಗಾಗಿ ಇಂದೂ ನಾನು ಪ್ರಯತ್ನಿಸುತ್ತಲೆ ಇದ್ದೇನೆ.ಇರಲಿ ಇವತ್ತು ಅನೇಕ ವಿದ್ಯಾರ್ಥಿಗಳು ಶಿಕ್ಷಕರಾಗಲು ತರಬೇತಿ ಮಹಾವಿದ್ಯಾಲಯದ ಕಡೆ ಮುಖ ಮಾಡುತ್ತಿದ್ದಾರೆ, ಸಂತೋಷದ ವಿಷಯವೂ ಕೂಡಾ ಹೌದು. ಆದರೆ ಪ್ರಶ್ನೆ ಮಾಡುವ ಕೌಶಲ್ಯದಲ್ಲಿ ಎಡವಿದ್ದನ್ನು ನಾನು ನೋಡಿದ್ದೇನೆ. ಅದರ ಕುರಿತು ವಿಷಯ ಹಂಚಿಕೊಳ್ಳುವ ಅವಕಾಶವನ್ನು ಗುರುಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯ ನನಗೆ ನೀಡಿತ್ತು .ಅದು ಹೇಗೆಂದರೆ ರಾಜ್ಯೋತ್ಸವದ ದಿನಾಚರಣೆ ಅತಿಥಿಯಾಗಿ ಮಾತನಾಡುವ ಸಂದರ್ಭ ವದು....ರಾಜ್ಯೋತ್ಸವ ಕುರಿತು ಮಾತನಾಡುವಾಗ.... ಈ ವಿಚಾರ ಅಪ್ರಸ್ತುತ ಎಂದು ಅನಿಸುವದಿಲ್ಲವೆ ? ಅನಿಸಬಹುದು, ನಾನು ರಾಜ್ಯೋತ್ಸವದ ಕುರಿತು ಮಾತನಾಡಿದ ಮೇಲೆಯೇ ಅನುಮತಿ ಪಡೆದು ನನ್ನ ಅನುಭವ ಹಂಚಿಕೊಂಡದ್ದು ಪ್ರಶಿಕ್ಷಣಾರ್ಥಿಗಳು ಎಂದರೆ ರಾಜ್ಯದ ಉದ್ದಗಲಕ್ಕೆ ಜ್ಞಾನವನ್ನು ಬಿತ್ತರಿಸಲು ಹೋಗುವವರು ಅವರಿಗೆ ಪ್ರಶ್ನೆಗಳ ಮಹತ್ವ ಇರಲಿ ಎಂದು ಹೇಳಿದೆ ಅಷ್ಟೇ. ಇದರ ಕುರಿತಾದ ಒಂದು ಲೇಖನ ಮಾಡಿದರೆ ಹೇಗೆ ಎಂದು ತಲೆಯಲ್ಲಿ ಸುಳಿದಾಡಿದ್ದೆ ತಡ ನನ್ನ ಬೆರಳು ಮೊಬೈಲ್ ಮೇಲೆ ಓಡಾಡಲು ಪ್ರಾರಂಭ ಮಾಡಿದ್ದು. ತಮ್ಮ ಅಮೂಲ್ಯ ವೇಳೆ ಕತ್ತರಿ ಹಾಕಿದ್ದಕ್ಕೆ ಕ್ಷಮಿಸಿ. ಶುಭರಾತ್ರಿ.
No comments:
Post a Comment