Sunday, January 9, 2022

* ಕಾಲ ಕಳೆದ ಮೇಲೆ *

ಎತ್ತರಕ್ಕೆ ಬೆಳೆದಂತೆ 
ರೆಂಬೆ ಕೊಂಬೆಯ ವೈಭವ /
ಹೂವು ಹೀಚು ಕಾಯಿ ಹಣ್ಣು
ಮೈತುಂಬ ಸಿರಿತನದ ಭಾವ //
ಕರೆಯದೆ ಬರೆಯದೇ 
ಪಡೆದೆ ಹಿರಿತನದ ಗೌರವ //
ಗುಬ್ಬಿ ಗಿಡುಗ ಕಾಗೆ 
ಕೋಗಿಲೆಗಳ ಕಲರವ //
ಸಾಗಿ ಹೋಗುವ ದಾರಿ 
ಹೋಕರಿಗೂ ನಾನೇ ಬೇಕು/ 
ಧನಿದು ಬಂದವನಿಗೂ ಮುದ 
ನೀಡುವ ಮುದ್ದಿನ ಮಾವ //
ಸದ್ದಿಲ್ಲದೆ  ಗೆದ್ದಿತು ಓಡುವ ಕಾಲ
ಒಂದೊ..  ಎರಡೊ.. ಶತ ಕಾಲ 
ಹತ ಮಾಡಲು ಬಂದೆ ಬಿಟ್ಟಿತು //
ತನಿಸುವಾಗ ಹೊಗಳಿದ ಜನ  
ಉಸಿರು ಪಡೆದು ಉಬ್ಬಿದ ಜನ/
ಹೆಸರು ಹೇಳದೆ  ಕೊಸರಿ 
ಓಡುತಿರುವರಲ್ಲ ಪ್ರತಿದಿನ // 
ಎಲೆಯಲ್ಲಾ ಹಳದಿಯಾಗಿ
ಟೊಂಗೆಗಳೆಲ್ಲಾ ಅಂಗಹೀನ /
ಕತ್ತರಿಸುವ ಕಟುಕನಿಗೇನು ಗೊತ್ತು 
ನಿತ್ಯ ನೂರು ಜನರ ಹಿತಕೆ 
ಈತ ಸತ್ತಿರುವನೆಂದು //

            ಬಸನಗೌಡ ಗೌಡರ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...