Thursday, January 13, 2022

* ಕಳೆದುಕೊಂಡಿದ್ದೇನೆ *

ಕೇಳುವವರನ್ನು 
ಕಳೆದುಕೊಂಡಿದ್ದೇನೆ
ಯಾರಾದರೂ ಇದ್ದರೆ 
ಹುಡುಕಿ ಕೊಡಿ ...!

ಪಡೆಯಲು ಬೇಕಲ್ಲ 
ನಮಗೆ ಮಹಡಿ ? 
ನಮಗೂ ಬೇಕು 
ನಮ್ಮ ಮಕ್ಕಳಿಗೂ ಬೇಕು// 

ಸಿಗಬೇಕು ಎಲ್ಲಿಂದ ?
ನಾನು ಕಿಲಾಡಿ
ಕೇಳಲು ಕೊಡುವೆನು 
ಇವರಿಗೆಲ್ಲ ಲಂಚ.. ?

ಕೊಟ್ಚರೇನು ಶಿವಾ. 
ಕುಂಭ ಕರ್ಣನ ವಂಶ
ಮಲಗಿದ್ದಾರಲ್ಲಾ
ಇಲ್ಲದೆ ಹಾಸಿಗೆ ಮಂಚ..

ಇರಲಿ ಬಿಡಿ ..
ಹೇಳುವವರು ?
ಹೇಳುವವರಿಗೇನು ಬರ 
ಕೊಟ್ಟರೆ ಮೂರು ನಿಮಿಷ
ಕುಟ್ಟುವರು ನೂರು ನಿಮಿಷ

ಗಟ್ಟಿ ಕಾಳು ಬರುವುದೆ 
ಇಲ್ಲಾ ..ಆದರೇನು ?
ಪಟ್ಟು ಬಿಡದ ಜಗಜಟ್ಟಿಗಳು 
ಕೊಟ್ಟು ಬಿಡುವೆವು ಕುದರೆ.... 

ಕಾಯದೆ ಏರಿಸುವರು ಪೇರಿ ...
ಲಂಗು ಇಲ್ಲ ,ಲಗಾಮೆ ಇಲ್ಲ 
ಜಿಗದದ್ದೆ  ಜಿಗದಿದ್ದು... 
ಸಂದಿ, ಗೊಂದಿ ಒಂದೂ 
ಉಳಿಯುವದಿಲ್ಲ.
ಗಟಾರಗಳೆ ಇವರ ವಠಾರಗಳು!

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...