ಸಂಕ್ರಾಂತಿ ಹಬ್ಬ ಸಡಗರದ ಹಬ್ಬ
ಬೆಳೆದ ಫಸಲು ತರುವುದೆ ಉಬ್ಬು/
ಇದು ಭೂ ತಾಯಿ ಮಗನ ಹಬ್ಬ
ಸವಿಯೋಣ ಹಲ್ಲಿದ್ದವರು ಕಬ್ಬು//
ಮಾಗಿಯ ಚಳಿಯು ಹೋಗುವ ಕಾಲ
ಮೈತುಂಬ ಬಳದೇವ ಎಳ್ಳು ಬೆಲ್ಲ /
ಮನೆ ತುಂಬಾ ಸಡಗರವೆಲ್ಲಾ
ಮಣ್ಣಿನ ಮಗನ ಬಾಳು ರಸಗುಲ್ಲ//
ಬೆಳದೇನ ಜೋಳ ರಾಗಿ ಭತ್ತ
ಹಾಕೇನಿ ಹಗೆದಾಗ ಹತ್ತಿಪ್ಪತ್ತು /
ನನಗಿಲ್ಲ ಅನ್ನದ ಚಿಂತೆ ಇವತ್ತು
ಮಳೆಯರಾಯ ನಿನದೊಂದೆ ಚಿತ್ತ//
ಬಸವಣ್ಣ ನಿನ ಮೈ ತೊಳದೇನು
ಜೂಲಾ ಹಾಕೇನು ಸಾಲಾಗಿ ನಿಂತೇನು
ಅಗಸ್ಯಾಗ ಡುರಕಿ ಹೊಡಸೇನು
ಸೊಗಸಾಗಿ ಬೆಂಕಿ ತುಳಸೇನು //
ಸಜ್ಜಿಯ ರೊಟ್ಟಿ ಸೇಂಗಾದ ಹೋಳಿಗೆ
ಮುಳ್ಳ ಬದನೆಯ ಪಲ್ಯ ಮೇಲೆ ಗುರೆಳ್ಳ ಚಟ್ನಿ
ಅವ್ವ ಹಾಕಿದ ಕೆನೆ ಕೆನೆ ಮೊಸರು
ಸ್ವರ್ಗಕ್ಕೆ ಸವಾಲು ಹಾಕೇನು//
ಜನಪದ ಸೊಗಡಿನ ಹಾಡು ಸರ್ . ಸಂಭ್ರಮಿಸುವಂತಿದೆ
ReplyDelete