Saturday, February 5, 2022

ಭಾವ ಪೂರ್ಣ ಶ್ರದ್ಧಾಂಜಲಿ

ಭಾವ ಪೂರ್ಣ ಶ್ರದ್ಧಾಂಜಲಿ 

* ಮಾಯೆ ಇನ್ನೇನು ಉಳಿಸಿದೆ *

ಕನ್ನಡದ ಕಬೀರ್ ನ 
ತನ್ನೊಡಲಿಗೆ ಸೇರಿಸಿದ 
ಮಣ್ಣು ನೀ ಮಾಯೆ 
ಇನ್ನೇನು ಉಳಿಸಿದೆ ಇನ್ನೇನು 
ಉಳಿಸಿದೆ//

ಭಾರತದ ಭಾವೈಕ್ಯತೆಯ 
ಭಾವಕ್ಕೆ ಜೀವ ತುಂಬಿ 
ನಮ್ಮ ಮನದಲ್ಲರಳಿದ 
ಭಿನ್ನತೆಯ ರೋಗ ಕಳೆದ 
ಸಂತನ ಎಳೆದೆ ಮಾಯೆ 
ಇನ್ನೇನು ಉಳಿಸಿದೆ 
ಇನ್ನೇನು ಉಳಿಸಿದೆ//

ಜಾತಿ ಧರ್ಮಗಳ ಮರ್ಮ 
ಅರುಹಿ ಜ್ಯೋತಿಯಂತೆ ಬೆಳಗಿದ 
ಸರ್ವ ಧರ್ಮ ಸಂತನ ಎಳೆದೆ 
ಮಾಯೆ  ಇನ್ನೇನು ಉಳಿಸಿದೆ 
ಇನ್ನೇನು ಉಳಸಿದೆ //

ಮನುಕುಲದ ಆದಿ ಅಂತ್ಯ 
ಮನಮಿಡಿಯುವಂತೆ ಹೇಳಿ 
ಮಾನವೀಯತೆಯ ಮೆರೆದ 
ಮುನಿವರ್ಯನೆಳೆದೆ ಮಾಯೆ  
ಇನ್ನೇನು ಉಳಿಸಿದೆ ಇನ್ನೇನು 
ಉಳಿಸಿದೆ //

ಗರ್ವ ಪಡಲಿಲ್ಲ ಧರ್ಮ ಮರೆಯಲಿಲ್ಲ 
ಧರ್ಮದ ಮೂಲ ತಿರಳು, ಸರಳ ಎಲ್ಲಾ. 
ತಿಳಿಸಿದವರನ್ನೆ ನೀ ಬಿಡಲಿಲ್ಲ 
ಮಾಯೆ ಇನ್ನೇನು ಉಳಸಿದೆ 
ಇನ್ನೇನು ಉಳಸಿದೆ//

ನಡೆವ ದಾರಿ ಬಿರಿದರೇನು 
ಹಿಡಿವ ಕರಗಳು ಜೊತೆಗಿವೆ 
ಮತ್ತೆ ಸಂತ ಸುತಾರೆ ಬರನೆ ?
ಮಾಯೆ ಇನ್ನೇನು ಉಳಸಿದೆ 
ಇನ್ನೇನು ಉಳಸಿದೆ//

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...