Tuesday, February 1, 2022

* ಕ್ಷಮಿಸು ತಂದೆ *

ಈಗೀಗ ಗಾಂಧೀಜಿಯವರ ದೋಷಗಳನ್ನು ಪಟ್ಟಿ ಮಾಡುತ್ತಿರುವರಲ್ಲ ! 
ಮಾಡಲಿ ಬಿಡಿ ಅವರೂ ಮನುಷ್ಯರೆ ಅಲ್ಲವೆ ! 
ಗಾಂಧೀಜಿಯವರೆ ಹೇಳಿದ್ದಾರಲ್ಲವೆ ನಾನು ತಪ್ಪು ಮಾಡಿ ತಿದ್ದಿಕೊಂಡಿದ್ದೇನೆ ಎಂದು. 
ಯಾಕೆಂದರೆ ಅವರೂ ಮನುಷ್ಯರೆ ಅಲ್ಲವೆ.!
ಮಗನ ಮಂತ್ರಿ ಮಾಡಲು ಮೈಕ್ ಹಿಡಿಯಲಿಲ್ಲ.ಮೊಸಳೆ ಕಣ್ಣೀರು ಸುರಿಸಲಿಲ್ಲ 
ಆದರೂ ದೋಷಗಳ ಪಟ್ಟಿ!
ಮಾಡಲಿ ಬಿಡಿ ಅವರು ಮನುಷ್ಯರೆ ಅಲ್ಲವೆ!
ಕಂತೆ ಕಂತೆ ಹಣ ಎಣಿಸಲಿಲ್ಲ
ಮೈತುಂಬ ಸೂಟು ಬೂಟು ಹಾಕಲಿಲ್ಲ ಆದರೂ ದೋಷಗಳ ಪಟ್ಟಿ ! ಮಾಡಲಿ ಬಿಡಿ ಯಾಕೆಂದರೆ ಅವರು ಮನುಷ್ಯರೆ ಅಲ್ಲವೆ !
ದೇಶಕ್ಕೆ ಸ್ವಾತಂತ್ರ್ಯ ಸಿಗಲು ಕುಟುಂಬದ ಪ್ರಗತಿ ಮರೆತರು, ಹಿಡಿದ ತತ್ವಕ್ಕಾಗಿ ಜೈಲಿನಲ್ಲಿ ಮುದ್ದೆ ಮುರಿದರು. ಕಸ್ತೂರಿ ಬಾ ಸಾವಿನ 
ಬಾಗಿಲು ತಟ್ಟುವಾಗ ಸೂಪ್ 
ಕುಡಿಯದಂತೆ ತಾಕೀತು ಮಾಡಿ 
ಸತ್ಯ ಅಹಿಂಸೆಯ ಬೆನ್ನು ಬಿದ್ದರಲ್ಲ  
ಆದರೂ ದೋಷಗಳ
ಪಟ್ಟಿ ! ಮಾಡಲಿ ಬಿಡಿ ಯಾಕೆಂದರೆ 
ಅವರು ಮನುಷ್ಯರೆ ಅಲ್ಲವೆ !
ದೇಶ ಸ್ವತಂತ್ರ ಗೊಂಡಾಗ 
ಮಂತ್ರಿಯಾಗಬೇಕೆಂದು ಸಮಾಲೋಚನೆ 
ಮಾಡಲಿಲ್ಲ! ನೌಕಾಲಿಯಲ್ಲಿ ಕೋಮುವಾದದ ದುಳ್ಳರಿಗೆ ಬಲಿಯಾದವರ ಕಣ್ಣೀರು ಒರೆಸಿದರಲ್ಲ.
ಆದ್ರೂ ಪಟ್ಟಿ ! ಮಾಡಲಿ ಬಿಡಿ  ಯಾಕೆಂದರೆ ಅವರು ಮನುಷ್ಯರೆ ಅಲ್ಲವೆ !
ಗಾಂಧೀಜಿ, ಗೊಡ್ಸೆ ಗುಂಡಿಗೆ ಹೆದರಿದರೊ 
ಇಲ್ಲೂ  ... ನಿತ್ಯ ಬರುವ ಗುಂಡಿಗೆ ನಾನಂತೂ ಹೇಳುವುದು ಒಂದೆ, ಕ್ಷಮಿಸು ತಂದೆ.

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...