Friday, March 18, 2022

* ನಾನೂ ಬರಲೆ *

NugV

* ನಾನು ಬರಲೆ *

ಆಶೆಗಳ ಕೊಂಡವರೆ ಆಗಸದಿ 
ನಡೆದವರೆ ದೇಶಾಂತರಕೆ 
ನಾನೂ ನಿಮ್ಮೊಂದಿಗೆ ಬರಲೆ /

ಏಣಿಯ ಏರಲು ಓಣಿಯ 
ಮಕ್ಕಳಿಗೆ ಯಾಕೆಲ್ಲ ನೆಲವು 
ಕನಸಿನ ಏಣಿ ಏರಿ ಬರುವೆ/

ಲೋಹದ ಹಕ್ಕಿಯ ಮೇಲೆ
ಮೋಹದ ರೆಕ್ಕೆಗಳ ಕಟ್ಟಿ
ನಡೆದಿರುವದಾದರೂ ಎಲ್ಲಿಗೆ/ 

ಬಾಂಬುಗಳ ಬಿತ್ತಿ ಭರವಸೆಯ 
ನಂಬುಗೆ ಕಿತ್ತು, ಪ್ರೀತಿಯ ಸುಟ್ಟು
ತುಂಬಿಕೊಂಡು ಹೋಗುವುದೆಲ್ಲಿ /

ಬಿಟ್ಟು ಹೋಗಲು ಉಳಿಸಿದ್ದೇನು
ಕೆಟ್ಟು ಹೋಗುವ ತೆಂಗಿನ ಚಿಪ್ಪು
ಬಿಟ್ಟರೂ ಮನಯಲ್ಲಾ ಕೊಳಕು/

ರೆಕ್ಕೆಗಳನು ಕಟ್ಟಿರಿ ನಮಗೆ ಒಮ್ಮೆ    
ಚುಕ್ಕೆಗಳ ಮುಟ್ಟಿ ಚಂದ್ರಮನ 
ಮೆಟ್ಟಿ  ಕುಣಿದಾಡಲು ಬರವೆ/

ಮನೆಪಾಠ ಒಂದು, ಶಾಲೆಗಳ 
ಸಹವಾಸ ಪಾಠ ಇನ್ನೊಂದು  
ಸಹಜತೆ  ತಿಳಿಯದೆ ನೊಂದೆ /

ಅಪ್ಪನ ಕನಸು ಉಪ್ಪರಗಿ ಮೇಲೆ
ಸಪ್ಪೆಯಾಗಿದೆ ಶಾಂತಿಯ ಕಳೆಯು
ಹೊತ್ತಿ ಉರಿದಿದೆ ಬೆಂಕಿಯ ಮಳೆ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...