Friday, March 4, 2022

* ಕರ್ತವ್ಯವೆ ದೇವರು *

ನಾನೊಬ್ಬ ಹಿಂದು ಭಾರತದ ಬಂಧು 
ಯಾಕೆಂದರೆ ನಾವು ಬಂದಿರುವುದೆ 
ಸಿಂಧೂ ನೆಲದಿಂದ //
ನನ್ನ ರಕ್ತ ದೊಂದಿಗೆ ಸಂಬಂಧ 
ಬೆಳೆಸದವನೂ ನನ್ನ ಸಂಬಂಧಿ //
ಎನ್ನ ಮನೆಯಂಗಳದಿ ಅನ್ನ 
ಉನ್ನದವನು ನನ್ನ ಬಂಧು /
ತನ್ನ ಮನೆಯಂಗಳದಿ ಎನಗೆ 
ಅನ್ನ ನೀಡದವನು ಎನ್ನ ಬಂಧು// 
ಏಕೆಂದರೆ ಭಾರತದ ಸಂಸ್ಕೃತಿಯೇ 
ವಸುದೈವ ಕುಟುಂಬಕಂ ಸೂತ್ರದಿಂದ//
ತನ್ನ ಪಲ್ಲಕ್ಕಿ ಹೊರಲು ಅನ್ನವನಿಕ್ಕಿ 
ಹೊಗಳಿ ಹೊನ್ನಸೂಲಕೇರಿಸಿದರೆ 
ಕರೆಯಲಿ ಹೇಗೆ ಬಂಧು? //
ಕಣ್ಣಿದ್ದು ಕುರುಡ,ಕಿವಿ ಇದ್ದು ಕಿವುಡ,
ಕಾಲು ಇದ್ದು ನಡೆಯದವರ 
ಬಾಯಿದ್ದು ಮಾತಾಡದವರ ಕಾಲವಿತ್ತು //
ಬಾಗಿಲಿಗೂ ಕಣ್ಣಿದೆ ಗೋಡಗೂ ಕಿವಿಯಿದೆ 
ಮನೆಯೇ ಓಡಾಡುವ ಬಂಡಿ
ಮರ್ಕಟ ಕಾಣದೆ ಜಿಗಯದು ಇವತ್ತು//
ಹನ್ನೆರಡು ತಲೆಮಾರು ಹಡದಿ ಹಾಸಿದರೂ ಸನ್ನಡತೆಯಿಂದ ಸದ್ಗುರುವೆ ಆಗಿಹರು /
ಹತ್ತು ತಲೆಮಾರು ಕತ್ತೆಯಂತೆ ದುಡಿದವರು 
ಉತ್ತಮ ಧಣಿಯೆ ಆಗಿಹರು//
ಅವರವರ ಕಾರ್ಯದಲ್ಲಿ ಅವರೆ ಶ್ರೇಷ್ಠ 
ಯಾವುದು ಇಲ್ಲ ಕನಿಷ್ಠ 
ಕಸಗೂಡಿಸುವ ಕೈಗಳಿಗೂ 
ಕೈಮುಗಿಸಿಕೊಳ್ಳುವ ಅರ್ಹತೆ ಯುಂಟು 
ಕರ್ತವ್ಯವೆ ದೇವರೆಂದಾಗ // 
ಇಲ್ಲದಿದ್ದರೆ ಕಸಕ್ಕಿಂತ ಕಡೆ 
ಕೊಟ್ಟ ಕೆಲಸ ಕಲಸಮಲಗೋರ ಮಾಡಿಟ್ಟಾಗ/

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...