Monday, March 7, 2022

*ಮೋಜು ಮಸ್ತಿ ಬಿಡಿ *

ಕೊರೋನಾದ ಕರಿನೆರಳು 
ಬಿದ್ದು ನಮಗೆಲ್ಲ ಆಗಿತ್ತು  
ಕರಾಳ ದಿನ/ 
ಒಳಗೊಳಗೆ ನಕ್ಕುರು ಕೆಲವು ಜನ/ 
ನಿಜವಾಗಿ ಅತ್ತವರು ಹಲವು ಜನ /
ಓದದೆ ಪಾಸು, ಇಲ್ಲ ನಪಾಸು
ಹೊಡೆದರು ಹೋಳಿ ಹಲಗೆ//
ನಿಜವಾಗಿ ಓದಿದವರಿಗೆ
ಬಂತು ಜೋಳಿಗೆ 
ಅವಕಾಶದ ಬಾಗಿಲು 
ಈಗ ಬಂದಿದೆ ಬಳಿಗೆ  
ಮಾರ್ಚ್ 28 ,ಎಪ್ರಿಲ್ 22 
ಅತ್ತವರು ನಗಬಹುದು 
ನಕ್ಕವರು ಅಳಬಹುದು.
ಅತ್ತವರು ಸಾಯುವರೇನು ? 
ದುಡಿದವರು ಬಡವರಲ್ಲ 
ಪಡೆದವರು ಶಾಸ್ವತವಲ್ಲ  
ತಡೆದು ಪಡೆಯಲು 
ಹೋರಾಡಿದವನೆ ಸಾಧಕ/
ಯಾಕಿನ್ನು ತಡ, ಪುಸ್ತಕ ಹಿಡಿ
ಮೋಜು ಮಸ್ತಿ ಬಿಡಿ,ಯುದ್ಧಕ್ಕೆ ನಡಿ/
ಪಾಸಾದರೆ ಮುಂದೆ ನಡೆ
ನಪಾಸಾದರೆ ಅನುಭವ ಪಡೆ 
ಅನುಭವವೆ ಶಿಕ್ಷಣ ಅಂಕವೊಂದೆ
ಮಾನದಂಡವಲ್ಲ, ಚಿಂತೆ ಬಿಡಿ //

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...