ಆತ್ಮೀಯ ವಿದ್ಯಾರ್ಥಿಗಳೆ ದಿನಾಂಕ 10.05.2022 ರಂದು ಇತಿಹಾಸ ವಿಷಯದ ಪರೀಕ್ಷೆ.ಈಗಾಗಲೇ ಹಲವು ವಿಷಯಗಳ ಪರೀಕ್ಷೆ ಬರೆದು ಪರೀಕ್ಷಾ ಭಯದಿಂದ ಹೊರಬಂದಿದ್ದೀರಿ, ಅದರಂತೆ ಮೇ 10 ನೇ ತಾರೀಖು ಕೂಡಾ, ಇತಿಹಾಸ ಸರಳ ಮತ್ತು ಆಸಕ್ತಿ ದಾಯಕ ವಿಷಯ ಅದಕ್ಕಾಗಿ ಸಿದ್ಧತೆ ಮಾಡಿಕೊಂಡಿದ್ದೀರಿ ಅದನ್ನು ಪರೀಕ್ಷೆಯ ಮೂರು ಗಂಟೆಯ ಅವಧಿಲ್ಲಿ ಬರೆಯುವುದು ಹೇಗೆ ? ಎನ್ನುವುದು ನಿಮ್ಮ ಪ್ರಶ್ನೆ.... ತುಂಬಾ ಸರಳ. 100 ಅಂಕಗಳ ಪ್ರಶ್ನೆ ಪತ್ರಿಕೆಯಲ್ಲಿ 1 ಅಂಕದ 15 ಪ್ರಶ್ನೆಗಳಲ್ಲಿ, 10 ಅಂಕಗಳು, 2 ಅಂಕಗಳ 15 ಪ್ರಶ್ನೆ ಗಳಲ್ಲಿ 20 ಅಂಕಗಳು ಇರುತ್ತವೆ. ಅಂದರೆ 30 ಪ್ರಶ್ನೆ ಗಳಲ್ಲಿ 30 ಅಂಕಗಳು ನಮಗಾಗಿ ! ಇಂಗ್ಲಿಷ್ ಭಾಷೆಯ ಪರೀಕ್ಷೆ ಮುಗಿದ ಮೇಲೆ ಮೂರು ದಿನಗಳು ನಮ್ಮ ಪರೀಕ್ಷೆ ತಯಾರಿಗಾಗಿ ಸಿಗುತ್ತವೆ ,ಅಲ್ಲವೆ ? ಅದರಲ್ಲಿ ಒಂದು ದಿನ ಸಂಪೂರ್ಣ ಒಂದು ವಾಕ್ಯದ ಮತ್ತು ಎರಡು ವಾಕ್ಯದ ಪಾಠದ ಹಿಂದೆ ಇರುವ ಅಭ್ಯಾಸದ ಪ್ರಶ್ನೆಗಳನ್ನು ಓದಿ ಮನನ ಮಾಡಿಕೊಳ್ಳಿ ಗೊಂದಲವಾದರೆ ತಕ್ಷಣವೇ ನನಗೆ ಪೋನ್ ಮಾಡಿ ಅಂದಾಗ 30 ಅಂಕಗಳು ನಿಮ್ಮ ಖಜಾನೆಗೆ ಬಿದ್ದಂತೆ, ಎರಡನೆಯ ದಿನ 5 ಅಂಕಗಳ ಪ್ರಶ್ನೆಗಳ ಬಗ್ಗೆ ವಿಚಾರ ಮಾಡಿ ಅವುಗಳಾದರೂ ಎಷ್ಟು 10 ಪ್ರಶ್ನೆಗಳಿವೆ ಅಲ್ಲವೆ, ಅದರಲ್ಲಿ ನೀವು ಬರೆಯಬೇಕಾದ ಪ್ರಶ್ನೆ ಗಳು ಎಷ್ಟು ? ಕೇವಲ 6 ಮಾತ್ರ ಗಡಿ ಬಿಡಿ ಯಲ್ಲಿ ಪ್ರಶ್ನೆ ಆಯ್ಕೆ ಮಾಡಿಕೊಳ್ಳಬೇಡಿ. ಪ್ರಶ್ನೆ ಪತ್ರಿಕೆ ಎಂದಾಗ ಸರಳ,ಮಧ್ಯಮ, ಕಠಿಣ ಪ್ರಶ್ನೆಗಳನ್ನು ಪ್ರಶ್ನೆ ಪತ್ರಿಕೆಯಲ್ಲಿ ಹಾಕಿರುತ್ತಾರೆ ಅಂಕಗಳನ್ನು ಗೆಲ್ಲುವ ಕಾಳಗದಲ್ಲಿ 6 ಸರಳವಾಗಿರುವ ಪ್ರಶ್ನೆಗಳನ್ನು ಗುರುತು ಹಾಕಿಕೊಂಡು ವೇಳೆ ಕಡೆಗೆ ಗಮನವಿಟ್ಟು 6 ಪ್ರಶ್ನೆ ಗಳಿಗೆ 15 ರಿಂದ 20 ಸಾಲು ಬರೆದು ಮುಂದೆ ಹೋಗಿ ಅನವಶ್ಯಕ ವೇಳೆ ಹಾಳು ಮಾಡದೆ 10 ಅಂಕದ ಪ್ರಶ್ನೆ ಕಡೆಗೆ ಸಾಗಿರಿ ಇನ್ನೊಂದು ಮಾತು, ಒಂದನೆಯ ಅಧ್ಯಾಯದಲ್ಲಿ 5 ಅಂಕದ 5 ಪ್ರಶ್ನೆಗಳು ಇವೆ ಅದರಲ್ಲಿ ಒಂದು ಪ್ರಶ್ನೆ ಕಡ್ಡಾಯವಾಗಿ 31 ನೇ ಪ್ರಶ್ನೆಯಲ್ಲಿ ಕೇಳಿರುತ್ತಾರೆ ಅಂದಾಗ 35 ಅಂಕಗಳು ನಿಮ್ಮ ಖಾತೆಗೆ ಖಂಡಿತವಾಗಿ ಜಮಾ ಆದಂತಾಯಿತು ಅಲ್ಲವೆ ? ಒಂದು ದಿನ ಸಂಪೂರ್ಣ ವಾಗಿ ಇದರ ಕುರಿತಾಗಿ ಚಿಂತಿಸಿ ಇನ್ನು 41 ನೇ ಪ್ರಶ್ನೆಗೆ ಬರೋಣ ಅದು ನಕ್ಷೆ ಪ್ರಶ್ನೆ 10 ಅಂಕಗಳು,5 ಅಂಕಗಳು ಗುರುತಿಸಲು, ಅದರ ಇತಿಹಾಸದ ಮಹತ್ವ ಬರೆಯಲು 5 ಅಂಕಗಳು.. ನಿಮಗೆ ಅಭ್ಯಾಸಕ್ಕಾಗಿ ಇರುವ ಸ್ಥಳಗಳಾದರು ಎಷ್ಟು 20 ,ಈಗಾಗಲೇ ಕ್ಲಾಸ್ ನಲ್ಲಿ ಸಾಕಷ್ಟು ಬಾರಿ ಹೇಳಿ ಆಗಿದೆ ಎರಡು ಮೂರು ಬಾರಿ 15 ನಿಮಿಷ ಒಂದು ನಕ್ಷೆಯಲ್ಲಿ ಗುರುತಿಸಿ ಮನದಟ್ಟು ಮಾಡಿದರೆ 10 ಅಂಕಗಳು ಖಚಿತ. ಆವಾಗ ನಿಮ್ಮ ಅಂಕಗಳು 45 ಕ್ಕೆ ಏರಿತು ಅಲ್ಲವೆ ! ವ್ಯಕ್ತಿ ಹಾಗೂ ಆತನ ಸಾಧನೆ ಕುರಿತು ಹೊಂದಿಸಿ ಬರೆಯುವ ಪ್ರಶ್ನೆ ಇರುತ್ತದೆ. ಇವು ಹಿಂದೆ ಮುಂದೆ ಆಗಿರುತ್ತವೆ ಅದನ್ನು ಸರಿಯಾಗಿ ಹೊಂದಿಸಿ ಬರೆಯಿರಿ 5 ಅಂಕಗಳು ಬಂದವು. ಈಗ ನಿಮ್ಮ ಅಂಕಗಳು 50 . ಇನ್ನು ಕಾಲಾನುಕ್ರಮ ಪ್ರಶ್ನೆ ಪಠ್ಯದಲ್ಲಿರುವ ಸುಮಾರು100 ಘಟನೆ ಗಳನ್ನು ಮತ್ತು ಅದರ ಕಾಲಗಳನ್ನು ಪಟ್ಟಿ ಮಾಡಿರುತ್ತೀರಾ.... ಅವುಗಳನ್ನು 20 ನಿಮಿಷ ಸೂಕ್ಷ್ಮವಾಗಿ ಅವಲೋಕನ ಮಾಡಿರಿ ಪ್ರಶ್ನೆ ಪತ್ರಿಕೆಯನ್ನು ತೆಗೆಯುವವರು ಅವುಗಳನ್ನು ಕೇಳುವಾಗ ಅತೀ ಸಮೀಪದ ಅಂತರದಲ್ಲಿ ಕೇಳದೆ ಮೂರು (ಪ್ರಾಚೀನ, ಮಧ್ಯ ಕಾಲಿನ ,ಆಧುನಿಕ) ಕಾಲದ ಘಟನೆಗಳನ್ನು ಒಳಗೊಂಡಿರುವಂತೆ ಕೇಳಿರುತ್ತಾರೆ ಅವುಗಳಲ್ಲಿ ಘಟನೆ ಗಳನ್ನು ಸಾ.ಶ.ಪೂ.ಘಟನೆಗಳನ್ನು ಕ್ರಮಾನುತವಾಗಿ ಮೊದಲು ಬರೆದು ಆನಂತರ ಸಾ.ಶ.ಘಟನೆಗಳನ್ನು ಬರೆಯಿರಿ.5 ಅಂಕಗಳು ನಿಮ್ಮ ಖಾತೆಗೆ ಜಮಾ, ಈಗ ನಿಮ್ಮ ಅಂಕಗಳು 55 ...! ಓಹೋ... ನೀವು ಇತಿಹಾಸದಲ್ಲಿ ಪ್ರಥಮ ದರ್ಜೆ ವಿದ್ಯಾರ್ಥಿಗಳಾಗಲು ಸಮೀಪವೆ ಬಂದಿದ್ದೀರಿ ! ಇಷ್ಟು ಸಾಕೆ ? ಇನ್ನೂ 45 ಅಂಕಗಳು ಇವೆ. ಅದಕ್ಕಾಗಿ ಇನ್ನೊಂದು ದಿನ ಅಭ್ಯಾಸಕ್ಕಾಗಿ ಬಾಕಿ ಇದೆ ಅದರಲ್ಲಿ 10 ಅಂಕಗಳ ನಾಲ್ಕು ಪ್ರಶ್ನೆ ಗಳಿವೆ ಅದರಲ್ಲಿ ನೀವು ಬರೆಯಬೇಕಾದದ್ದು ಎರಡು ಪ್ರಶ್ನೆಗಳು ಮಾತ್ರ ಇತಿಹಾಸದಲ್ಲಿ ಮೂರು ವಿಭಾಗಗಳಿವೆ ಅಲ್ಲವೆ? ಹೀಗಾಗಿ ಕನಿಷ್ಠ ಎಂದರೂ ಒಂದು ವಿಭಾಗಕ್ಕೆ ಒಂದು ಪ್ರಶ್ನೆ ಬಂದೆ ಬರುತ್ತದೆ ಹಾಗಾಗಿ ಒಂದು ವಿಭಾಗದ ಹತ್ತು ಅಂಕದ ಪ್ರಶ್ನೆಗಳನ್ನು ಅತ್ಯಂತ ಆಳವಾಗಿ ಓದದೆ ಹೋದರೂ ನಡೆದೀತು... ಎರಡು ವಿಭಾಗದಲ್ಲಿ ಎರಡು ಹತ್ತು ಅಂಕದ ಪ್ರಶ್ನೆ ಬಂದೆ ಬರುತ್ತವೆ ಅದರಲ್ಲಿ ನೀವು ಆಳವಾಗಿ ಓದಿದರೆ ಕನಿಷ್ಠ ಒಂದು ಉತ್ತರಕ್ಕೆ 9 ಅಂಕಗಳು ಬರುತ್ತವೆ 9 ×2=18 ಈಗ ನಿಮ್ಮ ಅಂಕಗಳು 45+18=63.... ತೃಪ್ತಿ ಯಾಗಲಾರದು ಇನ್ನೊ 25 ಅಂಕಗಳಿಗಾಗಿ ಹೋರಾಟ, ಪರೀಕ್ಷೆ ಪ್ರಾರಂಭ ವಾಗುವವರೆಗೆ ಓದಿದರೆ ಕನಿಷ್ಠ 15 ರಿಂದ 20 ಅಂಕಗಳು ಬರುವಷ್ಟು ಓದಬಹುದು ಅಂದರೆ ನಿಮ್ಮ ಅಂಕಗಳ ನಾಗಾಲೋಟ 90 ರ ಗಡಿಗೆ ಬಂದು ನಿಲ್ಲುತ್ತದೆ. ಆತ್ಮ ವಿಶ್ವಾಸ ದಿಂದ ಬರೆದರೆ ಅಂಕಗಳು ನಿಮ್ಮ ಪದತಲದಲ್ಲಿ ಬಂದು ನಿಲ್ಲುತ್ತವೆ, ಅಲ್ಲವೆ ? ಇತಿಹಾಸವನ್ನು ಓದುವುದು ಇತಿಹಾಸ ನಿರ್ಮಿಸಲು ಎನ್ನವ ಮಾತನ್ನು ನಿಜ ಮಾಡುವುದು ನಿಮ್ಮ ಕೈಯಲ್ಲಿದೆ, ವಿದ್ಯಾರ್ಥಿಗಳೆ ಯಶಸ್ಸು ನಿಮ್ಮ ದಾಗಲಿ.ಶುಭಾಶಯಗಳು 🌷🌷
ಬಸನಗೌಡ ಯ. ಗೌಡರ
ಉಪನ್ಯಾಸಕರು ಬಾಲಕರ ಸ.ಪ.ಪೂ ಕಾ.ಗುಳೇದಗುಡ್ಡ
9480385494
My blog
BYGOUDAR.BLOGSPOT.COM
ಆತ್ಮೀಯ ವಿದ್ಯಾರ್ಥಿಗಳೆ ಮೇಲಿನ ನನ್ನ ಬ್ಲಾಗ್ ನಲ್ಲಿ ದ್ವಿತೀಯ ಪಿಯುಸಿ ಇತಿಹಾಸ ಪಠ್ಯದಲ್ಲಿ ವಿದ್ಯಾರ್ಥಿಗಳಿಗೆ 10 ಅಂಕಗಳ ಉತ್ತರ ಬರೆಯಲು ಅನುಕೂಲವಾಗಲು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಲಾಗಿದೆ.
1) ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಗಾಂಧೀಜಿಯವರ ಪಾತ್ರ.
2) 1885 ರಿಂದ 1920 ರವರೆಗನ ಸ್ವಾತಂತ್ರ್ಯ ಚಳುವಳಿಯ ಹಂತಗಳ ಸಂಕ್ಷಿಪ್ತ ವಿವರಣೆ.
3) ಅಕ್ಬರನ ಸಾಧನೆಗಳ ಸಂಕ್ಷಿಪ್ತ ವಿವರಣೆ.
4) ಅಶೋಕನ ಜೀವನ ಹಾಗೂ ಸಾಧನೆ ವಿವರಿಸಿ.
ವಿದ್ಯಾರ್ಥಿಗಳ ಅನಿಸಿಕೆ ಅನ್ವಯ ಈ ಪ್ರಶ್ನೆಗಳು ಕಠಿಣ ಎನ್ನುವುದಕ್ಕಾಗಿ ಬರೆಯಲಾಗಿದೆ.
5 ಅಂಕಗಳ ಪ್ರಶ್ನೆಗಳಲ್ಲಿ
1)ಭಾರತದ ಇತಿಹಾಸದ ಮೇಲೆ ಭೂಗೋಳದ ಪ್ರಭಾವ.
2) ಬಸವೇಶ್ವರರ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು.
No comments:
Post a Comment