Wednesday, May 11, 2022

* ಗ್ರಾಮ ದೇವತೆ *

* ಗ್ರಾಮ ದೇವತೆ *

ಏರಿಯ ಗುಡ್ಡದ ಮೇಲೆ 
ಕೇರಿಯ ಗೆರೆಯದಾಟಿ  
ಕೆರೆಯ ದಂಡೆಯ ಮೇಲೆ 
ನೆಲೆಯೂರಿದ ಕರಿಯಮ್ಮ ಲೀಲೆ !!

ಹರದಾರಿ ತುಳಿದ ಜನರು 
ದೂರದಿಂದಲೇ ಬಂತು ಭಕ್ತಿಯಿಂದ  
ಹರಕೆಯೊಂದೆ ಶಕ್ತಿ ಗಣ
ವನ ದೇವತೆ ತೋರು ಲೀಲೆ  !!

ಹೊನ್ನು ತುಂಬಿದ ಹಾನಾಪೂರ  
ಧನ್ಯವಾಯಿತಿಂದು  ಬರಪೂರ 
ಗಣ್ಯರು ಬಂದರು, ಮಾನ್ಯರು ಬಂದರು
ಬಿನ್ನಹ ಕೇಳು ಬಾರೊ ತಾಯೇ !! 

ಬನ್ನಿಯ ಎಲೆಯೊಳಗೆ
ಬಂಗಾರದನ್ನವ ನೀಡಿರುವೆ
ಭರವಸೆಯ ಬದುಕಿಗೆ ಹೊಸ 
ಬೆಳಕು ನೀಡಿರುವೆ ತಾಯೇ !!

ಮೂರು ವರ್ಷಕೊಮ್ಮೆ ಜಾತ್ರೆ 
ನೂರು ವರುಷವಾದರೂ ಹರಕೆ
ಯಾರು ಮಾಡಿದರೇನು, ಬಿಟ್ಟರೆ ಏನು ?
ಅಕ್ಷಯ ಪಾತ್ರೆ ಇಟ್ಟಿರುವೆ ತಾಯಿ!! 

ಕಲ್ಲು,ಗರಸಿನ ಭೂಮಿ  
ಎಲ್ಲೆ ಬಿತ್ತಿದರೂ ಬಂಪರ್ ಬೆಳೆ
ತಾನಿರುವ ಊರು, ಕೇರಿ 
ತಾವರೆಯಂತೆ ಅರಳಿಸಿದೆ ತಾಯಿ !!

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...