ಬುದ್ಧ ಪೂರ್ಣಿಮೆಯ ಶುಭಾಶಯಗಳು
*ಮಾತು ಹಣ್ಣಾಗಿವೆ
ಮನ ಮಲೀನವಾಗಿದೆ *
ಬುದ್ಧ ! ನಿನ್ನ ದಾರಿಯಲ್ಲಿದ್ದರೆ
ಏನು? ರದ್ದಿ ಕಾಗದ ಈ ಜನರೆಲ್ಲಾ
ನೋಡಲು ಕಣ್ಣುಗಳಿಲ್ಲ
ಕೇಳಿಸಿಕೊಳ್ಳಲು ಕಿವಿಗಳಿಲ್ಲ
ಹೇಳಲು ಬಾರದ ಮೂಗರು ಇವರೆಲ್ಲಾ !
ಮಾತು ಹಣ್ಣಾಗಿಸಿ ಮನ ಮಲೀನ
ಮಾಡಿದವರೆ ಗೆಲ್ಲುತಿರುವರು ಜಗದಲ್ಲೆಲ್ಲಾ!
ನೀನಾದರೂ ಸುದೈವಿ
ನಿನ್ನ ಮಾತು ಕೇಳಿಸಿಕೊಂಡವರೆ
ಬೆಳಗಿದರು ಜಗದ ತುಂಬೆಲ್ಲಾ
ಪಟ್ಟಿಯೂ ದೊಡ್ಡದೆ ಇದೆ
ಅಶೋಕ, ಕಾನಿಷ್ಕ, ಹರ್ಷವರ್ಧನ
ಒಬ್ಬರಾ ಇಬ್ಬರಾ...! ಕಿರಿಟ ಕೆಳಗಿಟ್ಟು
ನಮಿಸುವವರಿದ್ದರು ಮಕ್ಕಳನ್ನೆ ದೇಶ
ವಿದೇಶಗಳಿಗೆ ಕಳುಹಿಸಿ
ನಿನ್ನ ಮಾತಿಗೆ ಧ್ವನಿಯಾಗಿಸಿದ್ದರು.
ಎಂಟು ದಿಕ್ಕಿಗೂ ಗಂಟೆ ಬಾರಿಸಲು
ಸಂಘ ಕಟ್ಟಿದವರಿದ್ದರು
ನಿನಗೆ ,ನಿನ್ನ ಧರ್ಮಕ್ಕೆ, ನಿನ್ನ ಸಂಘಕ್ಕೆ ,
ಶರಣಾದವರಿದ್ದರು ಹಾಗಾಗಿ
ನೀನೂ ಒಬ್ಬ ಸುದೈವಿ
ಸಾವು ಕಾಣದ ಮನೆಯ
ಸಾಸುವೆ ತಾರವ್ವ ಎಂದಾಗ
ಬದಲಾದವರಿದ್ದರು !
ಕೈಗಳನ್ನು ಕಡಿದು
ಬೆರಳುಗಳನ್ನು ಕೊರಳಿಗೆ ಹಾರ
ಮಾಡಿಯೂ ಬದಲಾಗಿದ್ದರು !
ಹಾಗಾಗಿ ನೀನೂ ಒಬ್ಬ ಸದೈವಿ .
ಬುದ್ಧನೆಂದರೆ ಬೆಳಕೆನ್ನುವ ಭಾವ
ಬೆಳದು ಬಂದಿದೆ ಸಾವಿರ ಸಾವಿರ
ವರ್ಷಗಳು, ಇನ್ನೂ ಬದಲಾಗಿಲ್ಲ!
ತಲೆ ಕಡಿದು ತಲೆ ಹಿಡಿದು
ತಲೆತಲಾಂತರ ಕರಗದ ಆಸ್ತಿ ಮಾಡಿ
ತುಲಾಬಾರ ಮಾಡಿಸಿಕೊಂಡವರ ಮಧ್ಯೆ
ಬುದ್ಧನಿದ್ದರೂ ಏನು ತಾನೆ
ನಿರೀಕ್ಷೆ ಮಾಡಲು ಸಾಧ್ಯ !
ಬುದ್ಧ ಜಯಂತಿಯ ಸಿದ್ಧ ಶುಭಾಶಯ
ಓದಿ ನಿದ್ದೆ ಮಾಡಬೇಕಿತ್ತೋನೋ ಇಲ್ಲಿ ?
No comments:
Post a Comment