Wednesday, May 18, 2022

" ಏನೇ ಬರಲಿ ನಗುತ್ತಾ ಸ್ವೀಕರಸಿ "

"  ಏನೇ ಬರಲಿ ನಗುತ್ತಾ ಸ್ವೀಕರಸಿ "

        ಇಂದು ಎಸ್ ಎಸ್ ಎಲ್ ಸಿ ಫಲಿತಾಂಶದ ದಿನ.ಇಲಾಖೆಯ ಸದಾಶಯದಿಂದ ಅದು ನಮ್ಮ  ಮನೆಯ ಬಾಗಿಲುವರೆಗೆ ಬರುತ್ತಿದೆ, ನಮಗೆಲ್ಲ ಸಂತೋಷದ ವಿಚಾರ. ಇದಕ್ಕೆ ಅನ್ನುವುದು ಕಾಲ ಎಲ್ಲಾ ಅವಧಿಯಲ್ಲಿ ಒಂದೆ ತೆರನಾಗಿ ಇರುವುದಿಲ್ಲ ಅಂತಾ.ಅಂದು ಫಲಿತಾಂಶ ನೋಡಲು ಹೋಗುವುದೆ ಒಂದು ವಿಶಿಷ್ಟವಾದ ಅನುಭವವಾಗಿತ್ತಲ್ಲವೆ !.ಇದು ಮಾಹಿತಿಯುಗ ಮಾಹಿತಿ ಬಹುಬೇಗ ಎಲ್ಲರಿಗೂ ತಲುಪಲು ತುದಿಗಾjrrಲಲ್ಲಿ ನಿಂತಿರುತ್ತದೆ. ಹೀಗಾಗಿ ನಮಗಿಂತmmtjkyjmymmmk ನಮ್ಮ ಮಕ್ಕಳು ಸಾಕಷ್ಟು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ, ಮಾಡಿದ್ದಾರೆಯೂ ಕೂಡಾ, ಸಂತೋಷ. ಮಾಹಿತಿಗngmmgಳೆಲ್ಲವೂ ಶಿmmm.mmmಕ್ಷಣ ಅಲ್ಲ ಮಾಹಿತಿಗೆ ನಾವು ಹೇಗೆ ಪ್ರತಿಕ್ರಿಯೆ ನೀಡಬೇಕು ಎನ್ನುವು?gym?m?thhnmjದು ಕೂಡಾ ಒಂದು ಶಿಕ್ಷಣ ! ಆತ್ಮೀಯ ಪಾಲಕ,ವಿದ್ಯಾರ್ಥಿಗಳೆ ಫಲಿತಾಂಶಕ್ಕೆ ತಾವೆಲ್ಲ ತುಂಬಾ ತವಕದಿಂದ ಇರುವುದು ಸ್ವಾಭಾವಿಕವು ಕೂಡಾ ತಪ್ಪೇನೂ ಅಲ್ಲ ಬಿಡಿ ಆದರೆ ಫjmlmಲಿತಾಂಶ ಏನೇ ಬರಲಿ ಸಂತೋಷದಿಂದ ಸ್ವೀಕರಸೋಣ. ಈಗ ಯಾರು ಯಾರನ್ನು ದೂರುವ, ಇಲ್ಲವೆ ನಮ್ಮನ್ನು ನಾವು ದೂರುವ ಸಮಯವಲ್ಲ ಬದಲಾಗಿ ಈ ಮಾಹಿತಿ ಯುಗದಲ್ಲಿ ನಮ್ಮ ಮಗು ಹಿಡಿಯಬೇಕಾದ ಮಾರ್ಗ ಗುರುತಿಸಿ ನಿರ್ಧಾರ ತೆಗೆದು ಕೊಳ್ಳುವ ಕಾಲ ಈ ಸಂದರ್ಭದಲ್ಲಿ ಯಾರು ಸರಿಯಾದ ನಿರ್ಧಾರ ತೆಗೆದು ಕೊಳ್ಳುವರೊ ಅವರು ಮುಂದಿನ ದಿನಮಾನದಲ್ಲಿ ನಿಜವಾದ ಜೀವನದ ಫಲಿತಾಂಶ ಪಡೆಯಬಲ್ಲರು. ಇಂದು ಬರುವ ಫಲಿತಾಂಶದ ಗುಣಗಳು ಅಂತಿಮವೂ ಅಲ್ಲ, ನಿರ್ಧಾರ ತೆಗೆದುಕೊಳ್ಳಲು ಇರುವ ಕೇವಲ  ಕೆಲವು ಆಧಾರ ಸ್ಥಂಭಗಳು ಮಾತ್ರ .ನಿನ್ನೆ ದಿನ ನನಗೆ ಮೂವತ್ತು ವರ್ಷಗಳ ನಂತರ ಬಿಇಡಿ  ಕ್ಲಾಸ್ ಮೇಟ್ ಒಬ್ಬರು ನನ್ನದೆ ಸ್ನೇಹಿತರು ರಚಿಸಿದ ವಾಟ್ಸ್ಆಪ್ ಗ್ರೂಪ್  ನಲ್ಲಿ ಮೂವತ್ತು ವರ್ಷಗಳ ನಂತರ ಗಮನಕ್ಕೆ ಬಂದರು ಮತ್ತು ಹೀಗೆ ಬರೆದಿದ್ದರು " ನಾನು ಬಿಇಡಿ ಯಲ್ಲಿ ಹಿಂದಿನ ಬೆಂಚಿನಲ್ಲಿ ಕುಳಿತಿದ್ದ ವಿದ್ಯಾರ್ಥಿ ಬಹಳಷ್ಟು ವಿದ್ಯಾರ್ಥಿಗಳಿಗೆ ಗೊತ್ತಿರಿಲಿಕ್ಕಿಲ್ಲ. ಗ್ರೂಪ್ ರಚಿಸಿದ್ದು ತುಂಬಾ ಸಂತೋಷ ನನ್ನ ಹೆಸರು ಸೋಮಲಿಂಗ ಗೆನ್ನೂರ ಅಂತಾ ನಾನು ADC ಆಲಮಟ್ಟಿ ಬಾಗಲಕೋಟೆ" ಎಂದು ಬರೆದಿದ್ದರು ನಮಗೆಲ್ಲಾ ಎಷ್ಟು ಸಂತೋಷ ಆಗಿರಲಿಕ್ಕಿಲ್ಲ ಹೇಳಿ Back bencher become a back bone of the society  ಆಗಬಲ್ಲರು ಎನ್ನುವುದು ಮಾಡಿ  ತೋರಿಸಿದ್ದರು. ಅದಕ್ಕೆ ನಾನು ತಕ್ಷಣವೇ ಹೇಳಿದೆ ತಮ್ಮಂತಹ ಸಾಧಕರು ನಮ್ಮ ವಿದ್ಯಾರ್ಥಿಗಳಿಗೆ ನಾನು ಪಾಠ ಬೋಧನೆ ಮಾಡುವಾಗ ಗುಡ್ ಎಗ್ಜಾಂಪಲ್ ಆಗುತ್ತಿರಿ ಸರ್ ಅಂದಿದ್ದೆ. ಆದರೆ ಫಲಿತಾಂಶದ ಬಗ್ಗೆ ಬರೆಯುವಾಗ ಅವರ ಮಾತು ನೆನಪಿಗೆ ಬಂತು ಅವರ ಬಗ್ಗೆ ಬರೆಯಲು ಇನ್ನೂ ಸಂತೋಷ ಎನಿಸುತ್ತಿದೆ.ಫಲಿತಾಂಶಗಳಗೆ ಪುಲ್ ಸ್ಟಾಪ್ ಇರಲ್ಲ , ಇರಬಾರದು ಕೂಡಾ. ಮತ್ತೆ ಮತ್ತೆ ಒಳ್ಳೆಯ ಫಲಿತಾಂಶ ಬರುವಂತಹ ನಿರ್ಧಾರ ತೆಗೆದುಕೊಳ್ಳವ ಮನಸ್ಥಿತಿಯೆ ನಿಜವಾದ ಶಿಕ್ಷಣ.ಎಲ್ಲಾ ವಿದ್ಯಾರ್ಥಿಗಳು ಮತ್ತು ಪಾಲಕರು ಇವತ್ತಿನ ಫಲಿತಾಂಶವನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸೋಣ ಮತ್ತೆ ಜ್ಞಾನ ಗೆಲ್ಲುವ ಆಟ ಆಡೋಣ . ಫಲಿತಾಂಶ ನಿರೀಕ್ಷೆಯಲ್ಲಿರುವ ಎಲ್ಲರಿಗೂ ಶುಭಾಶಯಗಳು 🌷🌷🙏🙏

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...