ಸಮಾಜದಲ್ಲಿ ಸಾಮರಸ್ಯಕ್ಕೊಂದು ಅನುಭವ ಮಂಟಪ*
ಕಲ್ಯಾಣವೆಂಬುದು ಎಲ್ಲಿಹುದಯ್ಯಾ ? ಕಲ್ಲು ಹೃದಯಗಳಲ್ಲಿ ಅಲ್ಲ, ಮಲ್ಲಿಗೆಯಂತ ಮನಗಳಲ್ಲಿ ಬೆಣ್ಣೆಯಂತ ಹೃದಯಗಳಲ್ಲಿದೆ . ಅದು ನಡೆದದ್ದು ದಿನಾಂಕ 28.08.2022 ರಂದು. ಅಂತಹ ಅನುಭವ ಮಂಟಪದ ಶರಣನಾಗುವ ಸೌಭಾಗ್ಯವೊಂದು ನನಗೆ ಬಂದದ್ದು ನನ್ನ ಪೂರ್ವ ಜನ್ಮದ ಪುಣ್ಯದ ಫಲವೆ ಸರಿ. ಶ್ರೀ ಗುರುಸಿದ್ದೇಶ್ವರ ಬ್ರಹನ್ಮಠದ 1008 ಶ್ರೀ ಬಸವರಾಜ ಪಟ್ಟಾದಾರ್ಯ ಶ್ರೀಗಳ ಕನಸಿನ ಕೂಸು ಶ್ರಾವಣ ಮಾಸದ ಪ್ರವಚಗಳ ನಿರ್ವಹನೆಯ ಅಧ್ಯಕ್ಷ ಹಾಗೂ ಸ್ನೇಹಿತ ಶ್ರೀ ಚಂದ್ರಶೇಖರ ಹೆಗಡೆ ಸಹಾಯಕ ಪ್ರಾಧ್ಯಾಪಕರು ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಬೀಳಗಿ ,ಇವರ ಮುಂದಾಳತ್ವದಲ್ಲಿ ಲೋಕಾರ್ಪಣ ಗೊಂಡದ್ದು ಈಗ ಐತಿಹಾಸಿಕ ಸತ್ಯ. ಶ್ರಾವಣ ಮಾಸದಲ್ಲಿ ಸತ್ಕಾರ್ಯಗಳು, ಸತ್ ಚಿಂತಣೆಗಳು ನಡೆದು. ಸಾದು ಸಂತರ ಮಾತುಗಳನ್ನು ಕೇಳಿ ಪುಣಿತರಾಗುವದು ಸರ್ವೆ ಸಾಮಾನ್ಯ ಆದರೆ ಶ್ರೀ ಬಸವರಾಜ ಪಟ್ಟಾದಾರ್ಯ ಮಹಾಸ್ವಾಮಿಗಳ ಹೊಸ ಪ್ರಯೋಗವೊಂದು ಶ್ರೀಮಠದಲ್ಲಿ ನಡೆಯಿತು, ಅದೇನಂದರೆ ಶ್ರೀ ಗುರು ಬಸವದೇವರ ಪ್ರತಿ ದಿನದ ಪ್ರವಚನದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಅನುಭವ ಹೊಂದಿರುವ ಅನುಭಾವಿಗಳ ಲಘು ಉಪನ್ಯಾಸ. ಶ್ರಾವಣ ಮಾಸದ ಮೂವತ್ತು ದಿನಗಳೂ ನಿರಂತರವಾಗಿ ನಡೆದು ಆಗಷ್ಟ 28 ರಂದು ಸಂಪನ್ನಗೊಂಡಿತು.ಅದು ನಿಜವಾಗಿಯೂ ಅನುಭವ ಮಂಟಪವೆ ಸರಿ.ನನಗೆ ವಿದ್ಯಾದಾನಮಾಡಿದ ನಾಲ್ಕು ಜನ ವಿದ್ಯುನ್ಮಣಿಗಳಾದ ಡಾ!ವ್ಹಿ ಎ ಬೆನಕನಾಳ,ಎಸ್ ಎಸ್ ರಾಜನಾಳ,ಸಿದ್ಧಲಿಂಗಪ್ಪ ಬರಗುಂಡಿ ಹಾಗೂ ಎಮ್ ಎಮ್ ಜಗತಾಪ ರ ಆದಿ ಯಾಗಿ 30 ದಿಗ್ಗಜರ ನಡುವೆ ನಾನೊಂದು ಬಡಪಾಯಿ ಶರಣ, ಹೂವಿನ ಜೊತೆ ದಾರವು ದೇವರ ಮುಡಿಗೇರದ ಹಾಗೆ ಅವರ ಮಧ್ಯೆ ನನಗೂ ಒಂದು ಸನ್ಮಾನ, ಧನ್ಯನಾದೆ ಭಗವಂತ.ಅದಕ್ಕಿಂತ ಇನ್ನೂಂದು ಮಹತ್ವದ ವಿಷಯ ಏನೆಂದರೆ, ಸಮಾಜ ಸಮಾಜಗಳ ನಡುವೆ ತಮ್ಮ ಸಮಾಜ ಮತ್ತು ಸಂಸ್ಕೃತಿಗಳ ವೈಭವೀಕರಣದ ಪೈಪೋಟಿಯ ಇಂದಿನ ದಿನಾಮಾನದಲ್ಲಿ ಸರ್ವ ಸಮಾಜದ ಒಳಿತು ಬಯಸುವ ಬಸವ ಚಿಂತನೆಗಳ ಸಾಕ್ಷಾತ್ಕಾರದ ಸಮಾರಂಭ. ಸಮಾಜಗಳು ಕಲುಷಿತವಾಗುತ್ತಿರುವ ಸೂಚನೆಗಳು ಕಾಣುತ್ತಿರುವ ಈ ಪರ್ವ ಕಾಲದಲ್ಲಿ ಸರ್ವ ಮಠಮಂದಿರಗಳು ಮಸೀದಿ ಚರ್ಚಗಳೂ ಅನುಸರಿಸಬಹುದಾದ ಸಾಮರಸ್ಯಕ್ಕೊಂದು ಸಣ್ಣ ಪ್ರಯೋಗ ಶ್ರೀ ಬಸವರಾಜ ಪಟ್ಟಾದಾರ್ಯ ಮಹಾಸ್ವಾಮಿಗಳ ಮನದಲ್ಲಿ ಅಂಕುರಿಸಿದ್ದು ಭಾವೈಕ್ಯತೆಯ ನಾಡಿಗೊಂದು ಭರವಸೆಯ ಆಶಾಕಿರಣ. ಶ್ರೀಗಳೆ ಹೇಳುವ ಹಾಗೆ ಶ್ರೀ ರಾಮಚಂದ್ರ ಸೇತುವೆ ಕಟ್ಟುವಾಗ ಅಳಿಲೊಂದು ಮಾಡಿದ ಸೇವೆ ! ಸಮುದ್ರಲ್ಲಿ ಮುಳುಗಿ ಹಸಿ ಮೈಯಲ್ಲಿ ಉಸುಗು ಮೆತ್ತಿಸಿ ಸೇತುವೆಗೆ ಆಸರೆಯಾದ ಬಗೆಯಂತೆ. ಚಿಟಕೆ ಉಸುಕಾದರೂ ಏನು ? ತಾವು ಮಾಡುವ ಸೇವೆ ಸಾಮರಸ್ಯ ಬೆಸೆಯುವ ಸೇತುವೇ ಆದೀತೆಂದು ಒಂದೆ ವೇದಿಕೆಯಲ್ಲಿ ಮೂವತ್ತು ದಿನಗಳ ಉಪನ್ಯಾಸ ಮಾಡಿದ ಅನುಭಾವಿಗಳನ್ನು ಸೇರಸಿ,ಅಂತಹ ವಿದ್ವತ್ ಮಣಿಗಳಿಗೆ ಶಾಲು ಹೊದಿಸಿ ಸನ್ಮಾನಿಸಿ ಅಭಿನಂದನಾ ಪತ್ರದ ಜೊತೆಗೆ, ಹೂ ದಳಗಳನ್ನು ಮಸ್ತಕದ ಮೇಲೆರಿಸಿ ಉಪನ್ಯಾಸದ ಜೊತೆಗೆ ಆಚರಣೆಯ ದೀಕ್ಷೆ ನೀಡಿದ ಕಾರ್ಯ ಮಾನವತ್ವವನ್ನೆ ಮೈಗೂಡಿಸಿಕೊಂಡು ವೈಚಾರಿಕ ನೆಲೆಗಟ್ಟಿನಿಂದ ಸಮಾಜವನ್ನು ಮುನ್ನಡೆಸುತ್ತಿರವ ಬಸವರಾಜ ಶ್ರೀಗಳಗೆ ಬರದೆ ಇನ್ನಾರಿಗೆ ಬರಲು ಸಾಧ್ಯ ಹೇಳಿ ? ಇವತ್ತಿನ ಕಾರ್ಯ ಗುಳೇದಗುಡ್ಡದ ಸಾಂಸ್ಕೃತಿಕ ಜಗತ್ತಿನಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹುದು. ಉಪನ್ಯಾಸ ಮಾಡಿದ್ದಕ್ಕೆ ಸನ್ಮಾನಿಸಿ ಅಭಿನಂದನಾ ಪತ್ರ ನೀಡಿದ ಶ್ರೀ ಮಠಕ್ಕೆ ಹಾಗೂ ಶ್ರಾವಣ ಮಾಸದ ಪ್ರವಚನ ಉಸ್ತುವಾರಿ ಅಧ್ಯಕ್ಷರಾದ ಚಂದ್ರಶೇಖರ ಹೆಗಡೆಯವರಿಗೆ ಹಾಗೂ ಮಠದ ಎಲ್ಲಾ ಸದ್ಬಕ್ತರಿಗೆ ಹೃದಯಪೂರ್ವಕ ಧನ್ಯವಾದಗಳು.
No comments:
Post a Comment