Monday, October 3, 2022

ನುಡಿನಮನ



*ಚಾಲುಕ್ಯರ ಕಲಾ ಕಾಂತಿ
ಈ ಶೀಲಾಕಾಂತ *

ಚಾಲುಕ್ಯರ ಕಲೆಗಳ ಭಾವಕೆ
ಜೀವ ತುಂಬಲು ಸಿಂದಗಿಯಿಂದ
ಬದಾಮಿಗೆ ಬಂದ ॥

ಭಾಷೆಯ ಬೋಧನೆ ವೇಷದಿ
ಆಶೆಯ ತುಂಬಿದ ಶಿಷ್ಯರಲಿ
ವಿಶ್ವಕರ್ಮನ ಕೃಪೆಯಿಂದ॥

ಶಿಲೆಗಳಲರಳಿದ  ಕಲೆಗಳಗೆ 
ಅಕ್ಷರ ಮಾಲೆಯ ಬರೆದ ಈ ಕಂದ 
ಸರಸ್ವತಿಯ ಕೃಪೆಯಿಂದ ॥

ದೇಶ ವಿದೇಶಗಳ ಪ್ರವಾಸಿಗರ 
ಮನತನಣಿದ ಆಂಗ್ಲ ಭಾಷೆಯ 
ಗುರು ಚಾಲುಕ್ಯ ಪ್ರೀತಿಯಿಂದ॥

ಇತಿಹಾಸದ ಗತ ಅರಳಿಸಿ 
ಭೂತಕೂ ಚಾತಿಯ ನೀಡಲು 
ಕತೆಯಾದನು ಕಲೆಯಿಂದ॥

ಗುಡ್ಡದ ಪಡೆಗಳನಡ್ಡೆಯ ಮಾಡಿ 
ಅಡಿ ಅಡಿ ಕಲೆಗಳ ಅಮೃತ 
ಹೊರತೆಗೆದಾ ಗುರು ಗುರಿಯಿಂದ॥

ಗಾಂಧಿ ಜಯಂತಿಯ ದಿನವೇ 
ನಂದಿತು ವಾತಾಪಿಯ ಗತ 
ಸಾಹಿತ್ಯದ  ಕತೆಯೊಂದು॥

ಮಹಾತ್ಮಾನ ದಾರಿಯಲ್ಲಿ 
ಮತ್ಸರ ಮೀರಿದ ಕಲೆಗಾರನ ಕಲೆ ಮಾಯವಾಯಿತಿಂದು॥


       ಬಸನಗೌಡ ಗೌಡರ ಉಪನ್ಯಾಸಕರ ಗುಳೇದಗುಡ್ಡ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...