Tuesday, March 7, 2023

* ಮಹಿಳೆಯೇ ಸ್ವರ್ಗ, ಮೂಲದಲ್ಲಿ *

ನಾಳೆ ಮಾರ್ಚ 8 "ಮಹಿಳಾ ದಿನಾಚರಣೆ"
ವಿಶ್ವದ ಎಲ್ಲಾ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

* ಮಹಿಳೆಯೇ ಸ್ವರ್ಗ, ಮೂಲದಲ್ಲಿ *

ನೀನೆನ್ನ ಪಥದ ರಥದ ಗಾಲಿ। 
ಜೊತೆಯಾಗಿ ನಡೆದು  
ಕಥೆಯಾದೆ ನೀ ಜಗಕೆಲ್ಲ|। 

ನೀನೆನ್ನ ಕಳಸ, ದೇವರ ಮನಸು।
ಭಾವದಲ್ಲಿ ಬೆರೆತ ಬೆಳಕು
ಬೆಳಗಿದೆ ನೀ ಜಗವೆಲ್ಲ ।।

ನಿನ್ನಂತರಂಗ ಭಾವತರಂಗ।
ಹಿತವಾಗಿ ಬಾಳಲ್ಲಿ ಸುಳಿದು
ತಂಪೆರೆದೆ ನೀ ಮನಕೆಲ್ಲ।।

ನೀನೆನ್ನ ತಾಯಿ ,ತಂಗಿ, ಮಗಳು।
ಮತ್ತೆ ಮಡದಿಯಾಗಿ 
ಕಳೆದೆ ಕತ್ತಲೆ ನೀ ಬದುಕಿನಲ್ಲಿ।।

ನಿನ್ನಿಷ್ಟವ ತುಳಿದು, ಕಷ್ಟದಲ್ಲಿ ಕರಗಿ।
ಉರಿವ ಕಾಷ್ಠವಾದೆ   
ಅಹಾರ ನೀ ,ಅಡುಗೆಯಲ್ಲಿ॥

ನಿನ್ನ ಬಣ್ಣಿಸಲೆನಗೆ ಪದಗಳಿಲ್ಲ ।
ಹೊಣ್ಣು, ಮಣ್ಣು, ಮನುಕುಲದ ಕಣ್ಣು, 
ಮಹಿಳೆಯೇ ಸ್ವರ್ಗ, ಮೂಲದಲ್ಲಿ ॥

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...