Friday, August 11, 2023

77 ನೇ ಸ್ವಾತಂತ್ರ್ಯ ದಿನಾಚರಣೆಯ ಸುಭಾಶಯಗಳು, ವೇದಿಕೆ ಮೇಲೆ ಆಶೀನರಾಗಿರುವ ಎಲ್ಲಾ  ಗಣ್ಯ ಮಾನ್ಯರೆ ಹಾಗೂ ಗುಳೇದಗುಡ್ಡ ತಾಲೂಕಿನ ಸಮಸ್ತ ಬಂಧುಗಳೆ ಮತ್ತು ಮುದ್ದು ವಿದ್ಯಾರ್ಥಿಗಳೆ. ಇವತ್ತು ನಮಗೆಲ್ಲ ಸಂತೋಷ ದಿನ ನಾವೆಲ್ಲಾ ಸಡಗರ ಸಂಭ್ರಮದಿಂದ ಈ ಹಬ್ಬವನ್ನು ಆಚರಿಸುತ್ತಿದ್ದೇವೆ. ಈ ಹಬ್ಬ ಉಳಿದೆಲ್ಲ ಹಬ್ಬಗಳಿಗಿಂತ ಶ್ರೇಷ್ಠವಾದದ್ದು ಏಕೆಂದರೆ ಇದು ನಮಗೆಲ್ಲ ಸ್ವಾತಂತ್ರ್ಯ ಸಮಾನತೆ ಗೌರವದ ಬದುಕನ್ನು ನೀಡಿದ ಸುದಿನದ ಹಬ್ಬ . ಈ ಒಂದು ದಿನಕ್ಕಾಗಿ ಭಾರತದ ಅದೆಷ್ಟು ಮಹಾನ್ ವ್ಯಕ್ತಿಗಳು ತಮ್ಮ ಬದುಕಿನ ಸಂತೋಷ ಕ್ಷಣಗಳನ್ನು ತೊರೆದು ತಮ್ಮ ಬಲಿದಾನ ಮಾಡಿದ್ದಾರೆ ತಮ್ಮನ್ನು ರಾಷ್ಟ್ರಕ್ಕಾಗಿ ಅರ್ಪಿಸಿಕೊಂಡಿದ್ದಾರೆ ಅವರೆಲ್ಲರನ್ನೂ ಸ್ಮರಣೆ ಮಾಡುವುದು ನಮ್ಮೆಲ್ಲರ ಆದ್ಯಕರ್ತವ್ಯ ಮತ್ತು ಹೆಮ್ಮೆಯ ವಿಷಯ.ಬ್ರಿಟಿಷರ ಗುಲಾಮಗಿರಿ ಮೆಟ್ಟಿ ನಿಲ್ಲಲು ಅವರು ಪಟ್ಟ ಶ್ರಮ, ದಿಟ್ಟ ಹೋರಾಟ ಇಂದಿನ ಪ್ರತಿಯೊಬ್ಬರಿಗೂ ಅನುಕರಣೀಯ .ದೇಶದ ಪ್ರತಿ ಪ್ರಜೆಗಳು ನಮಗೆ ರಾಷ್ಟ್ರವೇನು ನೀಡಿದೆ ಎಂದು ಕೇಳಿದೆ ರಾಷ್ಟ್ರದ ಅಭ್ಯುಧಯಕ್ಕೆ ನನ್ನ ಕೊಡುಗೆ ಏನು ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ ಅಂದಾಗ ರಾಷ್ಟ್ರ ಜಗತ್ತಿನ ಮುಂದುವರಿದ ದೇಶಗಳ ಸಾಲಿನಲ್ಲಿ ನಿಲ್ಲಲಿದೆ ರಾಷ್ಟ್ರಕ್ಕಾಗಿ ನಾವು ಕೊಡುಗೆ ನೀಡಲು ಗಡಿಗೆ ಹೋಗಬೇಕಿಲ್ಲ. ಕೋವಿಯನ್ನೆ ಹಿಡಿಯಬೇಕಿಲ್ಲಿ ಬದಲಾಗಿ ನಾವು ಹಿಡಿದ  ಅಧ್ಯಯನ, ಉದ್ಯೋಗದಲ್ಲಿ ತೋರುವ ಬದ್ದತೆ, ನಿಷ್ಠೆ, ಸಮರ್ಪನಾ ಮನೋಭಾವ ನಾವು ದೇಶಕ್ಕೆ ನೀಡುವ ಅಮೂಲ್ಯ ಕೊಡುಗೆ.
   ಆತ್ಮೀಯರೆ ಸ್ವಾತಂತ್ರ್ಯ ಬಂದಾಗ ನಮಗೆ ಕಾಡಿದ ಸವಾಲುಗಳು ಸಾವಿರದಷ್ಟಿದ್ದವು ಆಹಾರಕ್ಕಾಗಿ ಪಶ್ಚಿಮದ ಕಡೆ ನೋಡಬೇಕಾಗಿತ್ತು ಇಂದು ಹಸಿರು ಕ್ರಾಂತಿ ಮಾಡಿ ಸ್ವಾವಲಂಬನೆ ಸಾಧಿಸಿ ಇನ್ನೊಂದು ದೇಶಕ್ಕೆ ಕಳುಹಿಸಿಕೊಡುವ ಸಾಮರ್ಥ ಗಳಿಸಿದ್ದೇವೆ. ವೈದ್ಯಕೀಯ ಸಾಧನೆಗೆ ಜಗತ್ತು  ತಲೆಭಾಗಿದೆ .ಚಂದ್ರನ ಮೇಲೆ ಉಪಗ್ರಹ ಇಳಿಸಲು ಸಾಮರ್ಥ್ಯ ಹೊಂದಿರುವ ಬೆರಳೆಣಿಕೆಯ ದೇಶಗಳಲ್ಲಿ ನಮ್ಮ ದೇಶವು ಒಂದು ಎಂದು ಹೇಳಲು ನಮಗೆ  ಹೆಮ್ಮೆಯ ವಿಷಯ. ಇಷ್ಟು ಸಾಧನ ಮಾಡಿದಾಗ್ಯೂ ಇನ್ನೂ ಒಂದಿಷ್ಟು ಕೋಮುವಾದ  ಭ್ರಷ್ಟಾಚಾರದಂತ ಸಮಸ್ಯೆಗಳು ಕೂಡಾ ನಮ್ಮಲ್ಲಿ ಅಲ್ಲಲ್ಲಿ ಆಗಾಗ ವರದಿಯಾಗುತ್ತಿರುತ್ತವೆ ಅವಗಳೆಲ್ಲವನ್ನು ಮೀರಿ ಸಾಗೋಣ ಜೈ ಹಿಂದ್ ಜೈ ಕರ್ನಾಟಕ.

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...