Sunday, November 12, 2023

* ದೊರೆಯಾದ ದಾಸ *



ಹರಿ ಪಾದಕೆರಗಿ ದೊರೆಯಾದ 
ಈ ದಾಸ, ಆದಿಕೇಶವನ ದಾಸ।
ದೊರೆತನವ ತೊರೆದು ಹರಿನಾಮವುಂಡು 
ದಾರಿ ತೋರುವ ಗುರುವಾದ ಕನಕದಾಸ॥

ನಾದದ ಮಹಿಮೆ,ಹಿಡಿದ ತಾಳ ತಂಬೂರಿ
ಆದ ಶ್ರೀಹರಿ ದಾಸ,ತುಳಿದ ವ್ಯಾಸರ ದಾರಿ।
ತೊರೆದ ಸಂಸಾರ, ಪಡೆದ ಸಂಸ್ಕಾರ
ಬರೆದಿದ್ದು ಬದುಕಿನ ಬೆವರ ಹನಿಗಳು॥

ದಾಸರಲಿ ಅಶ್ವಿನಿದೇವತೆಗಳಿವರು
ಕೀರ್ತನೆಯ ಕನಕ ಪುರಂದರದಾಸರು
ಹೊಸೆದರು ಹರಿನಾಮ ಕೀರ್ತನೆಗಳ
ಬೆಸೆಯುತಿರುವವು ಮಾನವ ಪ್ರೇಮ

ಕತ್ತಿ ಗುರಾಣಿಗೆ ತತ್ತರಿಸದ ಈ ಜನ 
ತಾತ್ವಿಕ ನೆಲೆಗಟ್ಟಿಗೆ ಬಾಗುತಿದೆ ಈ ದಿನ
ನಿತ್ಯ ಅಧ್ಯಾತ್ಮಿಕ ಅನೂಭೂತಿಯ ಗಾನ
ಸತ್ಯವಾದವು ಸಂಗೀತದ ಆಲಾಪನ

ನೆಲ ಮುಗಿಲು ಸಲುಹಲೊಂದು  
ಜಲ, ತಿಲಬೆರೆತ  ಬೆಳಕನ ಕಿರಣ
ಕುಲಕುಲವಾವುದೆಂದವನೆಮಗೆ 
ಬಲ,ಸಲಹುತಿಹುದು ಸಮಬಲ॥

ನಾನು, ಅಳಿಯಲು ಸಾಗಿತು ಪಯಣ
ಮೇಲಂದವನ ಉಡುಗಿಸಿದ ಜಂಗಾಬಲ 
ಎಲ್ಲರರಿತರು ಮೂರು ಮಳದ ನೆಲ
ಬಲ್ಲವರೆ ಬಲ್ಲರು ಹರಿನಾಮದಾ ಬಲ॥

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...